ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಸ್ತಂಗತ

ನಂದಿನಿ ಮೈಸೂರು

ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ 76 ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಏ.22 ರಂದು ಅಂಗಾಂಗ ವೈಫಲ್ಯ ಅನಾರೋಗ್ಯ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೇ
ಇಂದು ಮಧ್ಯರಾತ್ರಿ ಶ್ರೀನಿವಾಸ್ ಪ್ರಸಾದ್ ಉಸಿರು ಚೆಲ್ಲಿದ್ದಾರೆ.

1947 ಆಗಸ್ಟ್ 6 ರಂದು
ವೆಂಕಟಯ್ಯ ಪುಟ್ಟಮ್ಮ ದಂಪತಿಯ ಪುತ್ರರಾಗಿ ಶ್ರೀನಿವಾಸ್ ಪ್ರಸಾದ್ ಜನಿಸಿದರು.
ಶ್ರೀನಿವಾಸ್ ಪ್ರಸಾದ್ ಪೂರ್ಣ ಹೆಸರು ವೆಂಕಟಯ್ಯ ಶ್ರೀನಿವಾಸ್ ಪ್ರಸಾದ್.ಮೈವಿವಿ ಪೋಲಿಟಿಕಲ್ ಸೈನ್ಸ್ ಎಂ.ಎ ಪದವಿ ಪಡೆದಿದ್ದರು.1977 ರಲ್ಲಿ ಬಿಜೆಪಿಯಿಂದ ಸ್ಪರ್ಥಿಸಿ ಮೊದಲ ಬಾರಿಯೇ ಗೆಲುವು ಸಾಧಿಸಿದ್ರೂ.ಚಾಮರಾಜನಗರದಲ್ಲಿ 6 ಬಾರಿ ಸಂಸದರಾಗಿದ್ರು.2 ಬಾರಿ ಶಾಸಕರಾಗಿ
14 ಬಾರಿ ಸ್ಪರ್ಧೆ 11 ಬಾರಿ ಗೆಲುವು ಸಾಧಿಸಿದ್ದರು.
2013 ರಿಂದ 2016 ವರಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಹಾಗೂ ಮುಜರಾಯಿ ಸಚಿವರಾಗಿದ್ದರು.

2017 ರಲ್ಲಿ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ರು.
2019 ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಮಲ ಅರಳಿಸಿ ಸಂಸದರಾಗಿದ್ದರು.
ಇತ್ತೀಚೆಗೆ ಸ್ವತಃ ಅವರೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. 50 ವರ್ಷ ರಾಜಕೀಯ ಜೀವನ ನಡೆಸಿದ್ದರು.

ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ದಲಿತ ನಾಯಕ ನಿಧನಕ್ಕೆ ಕುಟುಂಬಸ್ಥರು,ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *