ನ@ದಿನಿ
ಮೈಸೂರು: 6 ಆಗಸ್ಟ್ 2021
ಹಾಸನ ಲೋಕಸಭಾ ಕ್ಷೇತ್ರದ ಯುವ ಸಂಸದ , ಯುವಕರ ಮೆಚ್ಚುಗೆಯ ನೇತಾರ ಪ್ರಜ್ವಲ್ ರೇವಣ್ಣನವರ ಹುಟ್ಟು ಹಬ್ಬ ಸರಳವಾಗಿ ಆಚರಿಸಲಾಯಿತು.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಧರ್ಮಾಪುರ ಜಿಲ್ಲಾ ವ್ಯಾಪ್ತಿಯ ಸೋನಹಳ್ಳಿ ಹಾಡಿಯಲ್ಲಿ
ಪ್ರಜ್ವಲ್ ರೇವಣ್ಣನವರ ಹುಟ್ಟುಹಬ್ಬದ ಪ್ರಯುಕ್ತ, ಜೆಡಿಎಸ್ ಪಕ್ಷದ ಮೈಸೂರು ಜಿಲ್ಲಾ ಉಪಾಧ್ಯಕ್ಷರಾದ ಕೆಂಪನಾಯಕರ ನೇತೃತ್ವದಲ್ಲಿ , ಹಾಡಿಯ ಜನರಿಗೆ ಹೊದಿಕೆ, ಮತ್ತು ದಿನಸಿಕಿಟ್ ಗಳನ್ನು ವಿತರಿಸಲಾಯಿತು,
ಕಾರ್ಯಕ್ರಮದಲ್ಲಿ ಹುಣಸೂರು ತಾಲ್ಲೂಕು ಘಟಕದ ಉಪಾಧ್ಯಕ್ಷರು ದೇವರಾಜ್ ಒಡೆಯರ್, ಧರ್ಮಾಪುರ ಜಿ.ಪಂ. ಆಕಾಂಕ್ಷಿ ಸ್ಯಾಂಡಿ, ಗಣೇಶ್ ಗೌಡರು, ಸತೀಶ್ ಪಾಪಣ್ಣ, ವಿನೋದ್ ನಾಗವಾಲ, ಚಿಟ್ಟೆಕ್ಯಾತನಳ್ಳಿ ಚಂದ್ರಣ್ಣ, ರವಿ ನಾಯಕ್, ಮಹೇಶ್ ನಾಗರಾಜ್, ಮರಿನಾಯಕ, ಹಾಗೂ ಇನ್ನಿತರ ಜೆಡಿಎಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು…