ನಂದಿನಿ ಮೈಸೂರು
ಕಾರ್ತಿಕ ಮಾಸ ಹುಣ್ಣಿಮೆ ದಿನದಂದು ಕಲ್ಯಾಣಗಿರಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು.
ಶಾಸಕ ಶ್ರೀವತ್ಸ ರವರು,ಮಹಿಳೆಯರು,ಮಕ್ಕಳು,ಹಿರಿಯರು ಒಟ್ಟುಗೂಡಿ ದೇವಸ್ಥಾನದ ಮುಂಭಾಗ ಹಾಗೂ ಡಾ.ರಾಜ್ ಕುಮಾರ್ ರಸ್ತೆ ಉದ್ದಕ್ಕೂ ದೀಪ ಇಟ್ಟು ಎಣ್ಣೇ ಬತ್ತಿ ಹಾಕಿ ಪರಿಶುದ್ದ ಮನಸ್ಸಿನಿಂದ ದೀಪ ಹಚ್ಚಿ ಸಂಭ್ರಮಿಸಿದರು.
ನಾಡಿನಲ್ಲಿ ಮಳೆ ಇಲ್ಲದೇ ಬರ ಆವರಿಸಿದೆ.ರೈತರು ಕಂಗಾಲಾಗಿದ್ದಾರೆ.ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ನಾಡಿನ ಜನತೆಗೆ ಒಳಿತಾಗಲೀ ಎಂದು ಈ ಲಕ್ಷ ದೀಪ ಹಚ್ಚುವ ಮೂಲಕ ಪ್ರಾರ್ಥಿಸುತ್ತೇನೆ ಎಂದು ಶ್ರೀವತ್ಸ ತಿಳಿಸಿದರು.
2012 ರಲ್ಲಿ ಈ ದೇವಸ್ಥಾನ ಸ್ಥಾಪಿಸಲಾಗಿದ್ದು ಅಂದಿನಿಂದಲೂ ವಿಷ್ಣು ದೀಪೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ.ಈ ದಿನದಂದು
ದೇವರಲ್ಲಿ ವರ ಕೇಳುವುದು ಒಂದು ವಾಡಿಕೆ.ಇಂದು ಮತ್ತೆ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರದಾನಿಯಾಗಲಿ ಎಂದು ಬೇಡಿಕೊಂಡಿದ್ದು ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರು ಬಲ ಭಾಗದಿಂದ ವರ ಕೊಟ್ಟಿದ್ದಾರೆ ಎಂದು ದೇವಸ್ಥಾನದ ಸಂಸ್ಥಾಪಕ ಗಿರಿಧರ್ ಖುಷಿ ಹಂಚಿಕೊಂಡರು.
ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್,ಎಂ.ಎ.ಮೋಹನ್,ಉದ್ಯಮಿ ಎಂ.ಗೋಪಿನಾಥ್ ಶೆಣೈ ಮತ್ತು ಅವರ ಪತ್ನಿ ಸಾವಿತ್ರಿ ಗೋಪಿನಾಥ್ ಶೆಣೈ ಸೇರಿದಂತೆ ನೂರಾರು ಭಕ್ತರು ಭಾಗಿಯಾಗಿದ್ದರು.