ನಂದಿನಿ ಮೈಸೂರು
ಬಿಜೆಪಿಯವರು ಮೈಸೂರು ಚಲೋ ಪಾದಯಾತ್ರೆ ರಾಜ್ಯದ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಆದರೇ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆ ರಾಜ್ಯದ ಜನತೆಗೆ ಗೊತ್ತಿದೆ ಎಂದು ಎಂ ಎಲ್ ಸಿ ಡಾ.ತಿಮ್ಮಯ್ಯ ಹೇಳಿದರು.
ಮೈಸೂರಿನ ಜಲದರ್ಶಿನಿಯಲ್ಲಿರುವ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ದೇವರಾಜ ಅರಸು ಅವರ ನಂತರ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದವರು ಸಿದ್ದರಾಮಯ್ಯ.
ಈ ಹಿಂದೆ ಇದ್ದ ಸರ್ಕಾರಗಳು ಜನರಿಗೆ ಜನಪರ ಕಾರ್ಯಕ್ರಮವಾಗಲೀ,ಯೋಜನೆಗಳಾಗಲೀ ರೂಪಿಸಿಲ್ಲ.
ಬಡವರು,ದೀನ ದಲಿತರು,ಹಿಂದುಳಿದ ಸಮುದಾಯಗಳ ನಾಯಕ
ಸಿಎಂ ಸಿದ್ದರಾಮಯ್ಯ. ಅವರನ್ನ
ಭಾಗ್ಯಗಳ ಸರದಾರ ಎಂದೇ
ಕರೆಯುತ್ತಾರೆ. ಮೂಡಾ ಹಗರಣ ಎಂದು ಇಲ್ಲಸಲ್ಲದ ಆರೋಪ ಮಾಡಿ ಬಿಜೆಪಿ ಜೆಡಿಎಸ್ ಪಕ್ಷದವರು ಬೆಂಗಳೂರಿಂದ ಮೈಸೂರಿನವರಗೆ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ.ಇವರ ಪಾದಯಾತ್ರೆ ಕಾಂಗ್ರೆಸ್ ಪಕ್ಷಕ್ಕಾಗಲಿ ಸಿದ್ದರಾಮಯ್ಯ ಅವರಿಗಾಗಲೀ ಯಾವುದೇ ಪರಿಣಾಮ ಬೀಳೋದಿಲ್ಲ.ಸಿದ್ದರಾಮಯ್ಯ ಅವರ ಪತ್ನಿಯ ಭೂಮಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.ಬಿಜೆಪಿ ಸರ್ಕಾರ ಇದ್ದಾಗಲೇ ಸೈಟ್ ನೀಡಲಾಗಿದೆ.ಅವರ ಸರ್ಕಾರದಲ್ಲೇ ನೀಡಿದ್ದ ಸೈಟ್ ಅನ್ನ ಬಿಜೆಪಿಯವರು ಹಗರಣ ಅಂತೀದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕಿದರೇ ರಾಜ್ಯದ ಜನರು ದಂಗೆ ಏಳುತ್ತಾರೆ.
ಜನರು ನಮ್ಮ ಪರ ಇದ್ದಾರೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ಹಗರಣ, ಆರೋಗಳು ಇಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರಾಳಿ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಂದಿಸಿದರೆ ರಾಜ್ಯದಲ್ಲಿ ಮತ್ತೊಮ್ಮೆ ಅಡಳಿತ ನಡೆಸಬಹುದು ಎಂಬ ಹುನ್ನಾರ ಬಿಜೆಪಿ ಮತ್ತು ಜೆಡಿಎಸ್‌ನವರದು.ಮೈಸೂರು ಚಲೋ ಪಾದಯಾತ್ರೆ ಯಶಸ್ವಿ ಆಗುವುದಿಲ್ಲ.ಆಗಸ್ಟ್ 9 ರಂದು ಮೈಸೂರಿನ ಮಹಾರಾಜ ಮೈದಾನದಲ್ಲಿ ಜನಾಂದೋಲನ ಕಾರ್ಯಕ್ರಮ ಏರ್ಪಡಿಸಲಾಗಿದ್ದು
ಬಿಜೆಪಿಯ ಹುನ್ನಾರವನ್ನ ರಾಜ್ಯದ ಜನತೆಗೆ ತೆರೆದಿಡುತ್ತೇವೆ.ಮೈಸೂರು, ಮಂಡ್ಯ,ಚಾಮರಾಜನಗರ, ಹಾಸನ,ಕೊಡಗು ಸೇರಿದಂತೆ ರಾಜ್ಯದ ಜನರು,ಕಾಂಗ್ರೆಸ್ ಕಾರ್ಯಕರ್ತರು 3 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂಬ ನಿರೀಕ್ಷೇ ಇದೆ.ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮುಂದುವೆರದು ಮಾತನಾಡಿದ ಅವರು ಮೂಡಾ ಹಗರಣ ವಿಚಾರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ರಾಜ್ಯದ ಜನರು ದಂಗೆ ಏಳುವ ಸಾಧ್ಯತೆ ಇದೆ ಎಂದರು.