ನಂದಿನಿ ಮೈಸೂರು
ಮೈಸೂರು ಮಹಾ ನಗರ ಪಾಲಿಕೆ ನೀಡುವ ಉಪಕರಣಗಳ ಸದ್ಬಳಿಕೆಯಿಂದ ಜೀವನ ರೂಪಿಸಿಕೊಳ್ಳಬೇಕೆಂದು ಎಲ್ ನಾಗೇಂದ್ರ ಕರೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 23ರ ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್ ಎಂ ರವರ ನಗರ ಪಾಲಿಕೆಯ 24.10 ಯೋಜನೆಯಡಿ ಎಸ್ ಟಿ ,ಎಸ್ ಸಿ ಅನುದಾನದಿಂದ ತರಬೇತಿ ಹೊಂದಿರುವ ಮಹಿಳೆಯರಿಗೆ ದೇವರಾಜ ದೇವರಾಜು ಮೊಹಲ್ಲಾ
ದಲ್ಲಿರುವ ಅವರ ಕಚೇರಿಯ ಮುಂಭಾಗ 24 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿದ ಶಾಸಕ ಎಲ್ ನಾಗೇಂದ್ರ ನಂತರ ಮಾತನಾಡಿ
ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತಿದೆ, ಇದು ಹಲವು ಯುವಕ ಯುವತಿಯರು ಕರಕುಶಲ ಹಾಗೂ ಇನ್ನಿತರ ಕೌಶಲ್ಯ ಹೊಂದಿದ್ದು ಅಂಥವರು ಸಹ ಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಲು ಸರ್ಕಾರ ನೀಡುವ ಇಂತಹ ಉಪಕರಣಗಳು ಅತಿ ಉಪಯುಕ್ತವಾಗಿವೆ, ಫಲಾನುಭವಿಗಳು ನಗರ ಪಾಲಿಕೆ ಮೂಲಕ ವಿತರಿಸಲಾಗುವ ಇಂತಹ ಉಪಕರಣಗಳ ಸದ್ಬಳಿಕೆಯಿಂದ ಜೀವನ ರೂಪಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯು ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಅವಕಾಶ ನೀಡುತ್ತದೆ. ಇದು ಭಾರತದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉತ್ತಮ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2022 ರ ಅಡಿಯಲ್ಲಿ 20ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಹೊಲಿಗೆ ಯಂತ್ರವನ್ನು ಪಡೆಯಲು ಅರ್ಹರು. ಇದಕ್ಕೆ ಮಹಿಳೆಯರು ಒಂದು ರೂಪಾಯಿ ಖರ್ಚು ಕೂಡ ಮಾಡಬೇಕಾಗಿಲ್ಲ.
ಕೇಂದ್ರ ಸರ್ಕಾರ ಅದಕ್ಕೆ ನೆರವು ನೀಡುತ್ತದೆ.
ಎಂದು ಹೇಳಿದರು
ನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ನಗರ ಪಾಲಿಕೆಯ ಸಾರ್ವಜನಿಕರಿಗೆ ನೀಡುತ್ತಿರುವ ಸೌಲತ್ತುಗಳನ್ನು ನೀಡುತ್ತಾ ಬಂದಿದ್ದೇವೆ, 96 ಮಹಿಳೆಯರು ಹೂಲಿಗೆ ತರಬೇತಿ ಪಡೆದಿರುತ್ತಾರೆ, ಈಗಾಗಲೇ ತರಬೇತಿ ಪಡೆದ72 ಮಹಿಳೆಯರಿಗೆ ಹೊಲಿಗೆ ಯಂತ್ರ ಸಹ ನೀಡಿದ್ದೇವೆ,
ಇಂದು ಉಳಿದ 24 ತರಬೇತಿ ಪಡೆದಮಹಿಳೆಯರಿಗೆ ಹೂಲಿಗೆ ಯಂತ್ರ ವಿತರಿಸಿದ್ದೇವೆ,
ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಆಸೆ ಎಲ್ಲಾ ಮಹಿಳೆಯರಿಗೆ ಇದೆ. ತಾವೂ ಆರ್ಥಿಕವಾಗಿ ಸದೃಢವಾಗಬೇಕೆಂಬ ಬಯಕೆ ಇರುತ್ತದೆ. ಬಹುತೇಕ ಮಹಿಳೆಯರು ಒಂದಲ್ಲ ಒಂದು ಸಮಯದಲ್ಲಿ ಹೊಲಿಗೆ ಕಲಿತಿರುತ್ತಾರೆ. ಏನೂ ಗೊತ್ತಿಲ್ಲದಿದ್ದರೂ ಹರಿದ ಬಟ್ಟೆಗೆ ಹೊಲಿಗೆ ಹಾಕುವಷ್ಟು ಕಲಿತಿದ್ದೇನೆ ಎನ್ನುವ ಮಹಿಳೆಯರು ತುಂಬಾ ಮಂದಿ ಇದ್ದಾರೆ.
ಹೊಲಿಗೆ ಎಂದೂ ಬೇಡಿಕೆ ಕಳೆದುಕೊಳ್ಳದ ಉದ್ಯೋಗ, ಎಲ್ಲ ಕಾಲದಲ್ಲೂ ಇದಕ್ಕೆ ಬೇಡಿಕೆಯಿದೆ. ಕೆಲ ಮಹಿಳೆಯರಿಗೆ ಸಂಪೂರ್ಣ ಹೊಲಿಗೆ ತಿಳಿದಿದ್ದರೂ ಮನೆಯಲ್ಲಿ ಮಶಿನ್ ಇರುವುದಿಲ್ಲ. ಅದಕ್ಕೆ ಹೂಡಿಕೆ ಮಾಡಿ ಉದ್ಯೋಗ ಶುರು ಮಾಡುವಷ್ಟು ಹಣವಿರುವುದಿಲ, ಹಾಗಾಗಿ ಸರ್ಕಾರ ಹಾಗೂ ನಗರಪಾಲಿಕೆ ನೀಡುತ್ತಿರುವ ಹೊಲಿಗೆ ಯಂತ್ರವನ್ನು ಸದ್ಬಳಿಕೆ ಮಾಡಿಕೊಳ್ಳಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ನಗರಪಾಲಿಕೆಯ ಆರ್ ಐ ಮೋಹನ್, ಮಂಜುಳಾ,
ಚರಣ್, ಚಾಮರಾಜ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಗೋಪಾಲಕೃಷ್ಣಗೋಪಿ, ಪಾಪಣ್ಣ,
ಚಂದ್ರಕುಮಾರ್ ಬಿ, ಲೋಹಿತ್, ಭರತ್ ದೇಸಾಯಿ, ಸ್ವಾಮಿನಾಥ್, ಚೇತನ್, ಸುಕನ್ಯಾ, ಚಂದ್ರಕಲಾ ಹಾಗೂ ಇನ್ನಿತರರು ಹಾಜರಿದ್ದರು.