ಏನನ್ನು ಸಾಧಿಸಬೇಕು ಎಂಬ ಛಲ ಇರಬೇಕು – ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ನಂದಿನಿ ಮೈಸೂರು 

*ಏನನ್ನು ಸಾಧಿಸಬೇಕು ಎಂಬ ಛಲ ಇರಬೇಕು – ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ*

ಯಾವ ವಯಸ್ಸಿನಲ್ಲಿ ಏನನ್ನು ಮಾಡಬೇಕು ಎಂಬ ಕಲ್ಪನೆಯನ್ನು ನೀವು ಬೆಳೆಸಿಕೊಳ್ಳಬೇಕು ಹಾಗೂ ಏನನ್ನು ಸಾಧಿಸಬೇಕು ಎಂಬ ಛಲ ಇರಬೇಕು ಅದಕ್ಕೆ ಬೇಕಾದ ತಯಾರಿಯನ್ನು ಇಂದಿನಿಂದಲೇ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

ಪೀಪಲ್ಸ್ ಪಾರ್ಕ್ ನ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಗುರಿಗಳು ಚಿಕ್ಕದಾಗಿವೆ ಎಂದು ಊಹಿಸಿ ಆ ಗುರಿಗಳನ್ನು ತಲುಪುವ ಪ್ರಯತ್ನ ಮಾಡುತ್ತಿರಬೇಕು ಆಗ ಮಾತ್ರ ನಮ್ಮ ಗುರಿಗಳನ್ನು ಸುಲಭವಾಗಿ ತಲುಪಬಹುದು ಎಂದು ಪರೀಕ್ಷಾರ್ಥಿಗಳಿಗೆ ಸಲಹೆ ನೀಡಿದರು.

ರಾಂಕ್ ಹೋಲ್ಡರ್ಸ್ ಎಂದರೆ ಅವರೇನು ಆಕಾಶದಿಂದ ಇಳಿದಿರುವುದಿಲ್ಲ ಅವರು ಸಹ ನಮ್ಮಂತೆಯೇ ಇರುತ್ತಾರೆ ಆದರೆ ಓದುವ ಕಡೆಗೆ ಹೆಚ್ಚು ಗಮನ ಹರಿಸಿರುತ್ತಾರೆ ಅಂದರೆ ಕಠಿಣ ಪರಿಶ್ರಮದಿಂದ ಮಾತ್ರ ಗೆಲುವು ಸಾಧ್ಯ ಹಿಂದಿನ ದಿನಗಳಲ್ಲಿ ಪರೀಕ್ಷೆಗಳು ಇಲ್ಲದಿದ್ದರೂ ಓದುವವರು ಮಾತ್ರವೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಇಂದು ನೀವು ಏನನ್ನು ತ್ಯಾಗ ಮಾಡುತ್ತೀರೋ ಅವು ನಿಮಗೆ ಮುಂದೆ ಸಿಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಡಾ. ರಮೇಶ್ ನರಸಯ್ಯ, ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *