ಮೈಸೂರು : 24 ಆಗಸ್ಟ್ 2022
ನಂದಿನಿ ಮೈಸೂರು
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ದಸರಾ ವಸ್ತು ಪ್ರದರ್ಶನ-2022 ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ತಿಳಿಸಿದರು.
ದೊಡ್ಡಕೆರೆ ಮೈದಾನದ ಆವರಣದಲ್ಲಿ ಸೆ. 26 ರಿಂದ ಡಿ. ವರೆಗೆ ಒಟ್ಟು 90ದಿನಗಳ ಕಾಲ ನಡೆಯಲಿದೆ. ಈ ಬಾರಿ ವಸ್ತು ಪ್ರದರ್ಶನದಲ್ಲಿ ದಿ.ಪುನೀತ್ ರಾಜಕುಮಾರ್ ನೆನಪಿಗಾಗಿ ‘ಸ್ಯಾಂಡ್ ಮ್ಯೂಸಿಯಂ’ ಮತ್ತು ‘ಯೋಗ 3ಡಿ ವಿಡಿಯೋ ಮ್ಯಾಪಿಂಗ್’ ನಿರ್ಮಿಸಲಾಗುತ್ತಿದೆ.75 ನೇ ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ್ಯ ಹೋರಾಟಗಾರರ ಕಲಾಕೃತಿಗಳು ನಿರ್ಮಾಣ ಮಾಡಲಿದ್ದೇವೆ. ವಸ್ತು ಪ್ರದರ್ಶನದ ಮುಂಭಾಗದಲ್ಲಿ ಡಿಜಿಟಲ್ ಆಪ್ ನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ವಸ್ತು ಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮವಹಿಸಲಾಗುವುದು.ಒಳಚರಂಡಿ, ರಸ್ತೆ,ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕ್ ನಿರ್ವಹಣೆ ಸೇರಿದಂತೆ ಈಗಾಗಲೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.
ಕಲಾವಿದೆ ಗೌರಿ ರವರು ದಿ.ಪುನೀತ್ ರಾಜಕುಮಾರ್ ‘ಸ್ಯಾಂಡ್ ಮ್ಯೂಸಿಯಂ ಮಾಡಲಿದ್ದಾರೆ.
ವಸ್ತುಪ್ರದರ್ಶನ ಪ್ರಾಧಿಕಾರ
ದಲ್ಲಿ ಬರುವ ಆದಾಯದಿಂದಲೇ ವಸ್ತು ಪ್ರದರ್ಶನ ಮಾಡಲಾಗುತ್ತದೆ.ಸರ್ಕಾರದಿಂದ ಯಾವುದೇ ಅನುದಾನ ನೀಡಿಲ್ಲ.ಈ ಬಾರೀ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಸಿಎಂರವರು ಅನುದಾನ ನೀಡುವಂತೆ ಭರವಸೆ ನೀಡಿದ್ದಾರೆ. ಈ ಬಾರೀ ವಿಶಿಷ್ಟ ವಿನೂತನ ಕಾರ್ಯಕ್ರಮ ಜರುಗಲಿದೆ ಎಂದರು.