ನಂದಿನಿ ಮೈಸೂರು
ಮಾನಸಿಕ ಅಸ್ವಸ್ಥ ರೋಗಿಯನ್ನು ಕಳ್ಳ ಎಂದು ಭಾವಿಸಿ ಕೈ ಕಾಲು ಕಟ್ಟಿ ಹಾಕಿ ಹೆಚ್.ಡಿ ಕೋಟೆ ತಾಲೂಕಿನ ಚಾಮಾಲಪುರ ಗ್ರಾಮದ ಜನ ಥಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರಾದ ಜಗದೀಶ್ ಹಾಗೂ ಹೆಡ್ ಕಾನ್ಸ್ಟೇಬಲ್ ಗೋವಿಂದರಾಜು ಮಾನಸಿಕ ಅಸ್ವಸ್ಥನನ್ನ ಜನರಿಂದ ಬಿಡಿಸಿ ಅಲ್ಲಿನ ಜನರ ಮನ ವೊಲಿಸಿ ತಿಳಿ ಹೇಳಿ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಅಲ್ಲಿನ ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ.ನಂತರ ಆತನ ವಿಳಾಸವನ್ನು ಪತ್ತೆಹಚ್ಚಿ ಮನೆಯವರು ಬರುವ ತನಕ ಬೋಚಿ ಕಟ್ಟೆಯಲ್ಲಿರುವ ಬುದ್ದಿಮಾಂದ್ಯ ಕೇಂದ್ರದಲ್ಲಿ ಇರಿಸಲಾಗಿತ್ತು.ತದ ನಂತರ ಆತನ ಕಡೆಯವರು ಬಂದು ಹಾಸನ ಜಿಲ್ಲೆಯ ಗುಡುಗನ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ.