ಮೆಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರು ರೋಡ್ ಶೋ

ನಂದಿನಿ ಮೈಸೂರು

ವರುಣ ಕ್ಷೇತ್ರಕ್ಕೆ ಸೇರಿದ ಮೆಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರು ರೋಡ್ ಶೋ ನಡೆಸಿ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಅವ್ರು ಮತದಾರರನ್ನು ಉದ್ದೇಸಿಸಿ ಮಾತನಾಡಿ ಈ ಕ್ಷೇತದಲ್ಲಿ 15ವವರ್ಷದಲ್ಲಿ ಏನು ಕೆಲಸಗಳು ನಡೆದಿದೆಯೋ ಆ ಕೆಲಸಗಳನ್ನು ನಾನು 5ವರ್ಷ ಗಳಲ್ಲಿ ಮಾಡಿ ವರುಣ ಕ್ಷೇತ್ರ ವನ್ನು ಮಾದರಿ ಕ್ಷೆತ್ರವಾಗಿ ಬೆಂಗಳೂರಿನ ಗೋವಿಂದರಾಜನಗರ ಯಾವ ರೀತಿ ಮಾದರಿ ಹೊಂದಿದೆಯೋಆ ರೀತಿಯಲ್ಲಿ ಅಭಿವೃದ್ಧಿ ಪಡಿಸುವೆ ಬೆಂಗಳೂರು ನಗರ ಯಾವರೀತಿ ಅಂತರರಾಷ್ಟ್ರೀಯಮಟ್ಟದಲ್ಲಿ ಬೆಳೆದಿದಿಯೋಆರೀತಿ ಮೈಸೂರುನಗರವನ್ನು ಅಭಿವೃದ್ಧಿ ಪಡಿಸುವೆ ನಿಮ್ಮ ವೋಟಿನ ಶಕ್ತಿ ಮತ್ತು ಬೆಲೆ ಏನೆಂದು ತೋರಿಸುವೆ ಅದಕೋಸ್ಕರ ಕಮಲದ ಗುರುತಿಗೆ ಈ ಬಾರಿ ಮತ ನೀಡಿ ನನ್ನನು ಜಯಶೀಲನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತೇನೆ. ನನ್ನಗುರಿಅಭಿವೃದ್ಧಿ ಪರ್ವ ಕೇಂದ್ರಸರ್ಕಾರದ ನಮ್ಮ ಪ್ರಧಾನಿಯವರಾದ ನರೇಂದ್ರಮೋದೀನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ ವೇಳೆ 132ಕೋಟೀ ಜನರಿಗೆ ಏಕಕಾಲದಲ್ಲಿ ಲಸಿಕೆ ನೀಡಿದ ಸರ್ಕಾರ ಬಿ. ಎಸ್. ಯಡಿಯೂರಪ್ಪನವರುಕೂಡರಾಜ್ಯದಲ್ಲಿ ಉತ್ತಮವಾಗಿ ಕಾರ್ಯಕ್ರಮ ನಿರ್ವಹಿಸಿದರು.

ಇಂದು ಲಕ್ಹ್ಮೀ ಪುರ,ಶಿವಪುರ, ಹರೋಹಳ್ಳಿ, ಮೆಲ್ಲಹಳ್ಳಿ, ಬಡಗಲಪುರ, ಮೂಡಲಪುರ, ಚಟ್ನಹಳ್ಳಿ ಮತ್ತು ಪಾಳ್ಯ, ಮಹಾದೇವಿಕಾಲೋನಿ, ದುದ್ದಗೆರೆ,ಮುಂತಾದಕಡೆ ಮಾತಾಯಾಚನೆ ಮಾಡಿದರು ಈ ಸಂದರ್ಭದಲ್ಲಿ ಪ್ರತಾಪ್ ಸಿoಹ, ಅಪ್ಪಣ್ಣ, ವರುಣಕ್ಷೇತ್ರಧ್ಯಕ್ಷಕಲ್ಮಹಳ್ಳಿ ವಿಜಯಕುಮಾರ ಪ್ರಕಾಶ್ ಎಸ್. ಎಂ ಪಿ ಡೇವಲಪ್ಪರ್,ಮೆಲ್ಲಹಳ್ಳಿಮಹದೇವಸ್ವಾಮಿ ನಾಗೇಂದ್ರು ವೀರಭದ್ರಪ್ಪ ಎಲ್ಲ ಗ್ರಾಮಗಳ ಬಿಜೆಪಿ ಮುಖಂಡರುಗಳು ನೂರಾರು ಸಂಖ್ಯೆಯ ಮಹಿಳೆಯರು ಸಾಥ್ ನೀಡಿದರು.

Leave a Reply

Your email address will not be published. Required fields are marked *