ನಂದಿನಿ ಮೈಸೂರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಎಂ ಸಿ ಹುಂಡಿ ಮೈಸೂರು ತಾಲೂಕು, ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧ್ವಜಾಹರೋಹಣ ಕಾರ್ಯಕ್ರಮವನ್ನು, ಶಾಲೆಯ sdmc ಅಧ್ಯಕ್ಷರಾದ ಶ್ರೀ ವೆಂಕಟರಮಣ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀ ವಿಜಯಕುಮಾರ್ , ಶ್ರೀ ರಾಜೇಶ್ ,ಶ್ರೀಮತಿ ಲೀಲ ಹಾಗೂ ಎಸ್ಡಿಎಂಸಿ ಸದಸ್ಯರುಗಳು ಹಾಜರಿದ್ದರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಹಾದೇವರವರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ವೇದರತ್ನರವರು ಸಹ ಶಿಕ್ಷಕರಾದ ನಟರಾಜು ವಿಜಯ, ರವರು, ಗ್ರಾಮದ ಮುಖಂಡರು ಹಳೆಯ ವಿದ್ಯಾರ್ಥಿಗಳು ,Rlhp ಸಂಸ್ಥೆಯ ಪ್ರವೀಣ್ ಮತ್ತು ಸೋನು ,ಶಾಲೆಯ ಮಕ್ಕಳು ಹಾಜರಿದ್ದು .ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೆ ಸಂದರ್ಭದಲ್ಲಿ ಶಾಲೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕತರ ಫೋಟೋಗಳನ್ನು ದಾನವಾಗಿ ಮಂಜುಳಾ ಶಿಕ್ಷಕರು ಹಾಗೂ ಅವರ ತಂದೆ ಶ್ರೀ ತಿಮ್ಮೇಗೌಡ ರವರ ಹೆಸರಿನಲ್ಲಿ ದಾನವಾಗಿ ನೀಡಿದರು.
ಆಟೋ ಸ್ಪರ್ಧೆಯಲ್ಲಿ ಗೆದ್ದಂತ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್ ಬಹುಮಾನಗಳನ್ನ ನೀಡಿದರು.ಎಲ್ಲ ಮಕ್ಕಳಿಗೂ ಅಧ್ಯಕ್ಷರಾದ ವೆಂಕಟರಮಣ ಮತ್ತು ಅಂದಾನಿ ರವರು ಹಾಗೂ ಕೀಳನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಿಹಿ ವಿತರಣೆ ಮಾಡಿದರು.