ನಂದಿನಿ ಮೈಸೂರು
ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ M C ಹುಂಡಿ ಮೈಸೂರ್ ತಾಲೂಕು, ವರುಣ ಹೋಬಳಿ, ಇಲ್ಲಿ 74ನೇ ಸಂವಿಧಾನ ಅಂಗೀಕಾರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಸಂವಿಧಾನದ ಪ್ರಸ್ತಾವನೆ ಹಾಗೂ ಅಂಬೇಡ್ಕರ್ ಅವರ ವಿಷಯಗಳನ್ನು ತಿಳಿಸಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಡಯಟ್ ನ ಉಪನ್ಯಾಸಕರಾದ ,ಶ್ರೀಮತಿ ಜಯಂತಿ ಮೇಡಮ್ ರವರು, ಸರ್ಕಾರಿ ನೌಕರ ಸಂಘದ ಹಿರಿಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್ ರವರು, ಕೀಳನಪುರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ , ಡಾ//ಶ್ವೇತ ರವರು, ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಖಜಾಂಚಿ ಮಹಾದೇವ,ರವರು ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ವೇದರತ್ನ ರವರು ಹಾಗೂ ಮಕ್ಕಳು ಹಾಜರಿದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಜಯಂತಿ ರವರನ್ನು ಅಭಿನಂದಿಸಲಾಯಿತು.