ಮೈಸೂರು:17 ಮೇ 2022
ನಂದಿನಿ ಮೈಸೂರು
ಮೇ 20 ರಂದು ಆ್ಯಂಗರ್’ ಚಲನಚಿತ್ರ ತೆರೆ ಕಾಣಲಿದೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಬೇಕೆಂದು ನಿರ್ದೇಶಕ ರಂಗಾಯಣ ನಟರಾಜ್ ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮಗೆ ದೊಡ್ಡವರ ಬೆಂಬಲವಿಲ್ಲ. ಹೀಗಾಗಿ ತಾವೆಲ್ಲ ಹೊಸಬರ ತಂಡವನ್ನೇ ಕಟ್ಟಿಕೊಂಡು ಈ ಚಲನಚಿತ್ರ ನಿರ್ಮಿಸಲಾಗಿದೆ. ಚಿತ್ರದ ಕಥೆಯಲ್ಲಿ ಗಟ್ಟಿತನವಿದೆ. ಹೃದಯ ಸ್ಪರ್ಶಿಯಾಗಿದೆ ಎಂದು ತಿಳಿಸಿದರು.
ಅಲ್ಲದೆ, ರಾಜ್ಯಾದ್ಯಂತ ಸುಮಾರು ೫೦ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಹೊಸ ಮುಖ ಮನ್ವಿತ್ ಅವರು ನಾಯಕ ನಟರಾಗಿ ಅಭಿನಯಿಸಿದ್ದಾರೆ.ಖಳನಟ ಸತೀಶ್ ,ಬಾಲರಾಜ್ ವಾಡಿ,ಶಿವಾಜಿ,ರಕ್ಷೀತ್,ಆನಂದ್ ಬಾಬು,ರಾಮಚಂದ್ರರಾವ್
ನಟಿಸಿದ್ದಾರೆ. ಕಥೆಗೆ ಹೊಂದಿಕೊಂಡಂತೆ ಮೂರು ಉತ್ತಮ ಹಾಡುಗಳಿವೆ ಎಂದು ಸಹಾ ತಿಳಿಸಿದರು.