ಮೈಸೂರು:11 ಮೇ 2022
ನಂದಿನಿ ಮೈಸೂರು
ಮೇ 13ರಂದು ಬೆಂಗಳೂರಿನ ನೆಲಮಂಗಲದ ಬಳಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪ ಮೇಯರ್ ವಿ.ಶೈಲೇಂದ್ರ ತಿಳಿಸಿದರು.
ಮೈಸೂರು ಅರಮನೆ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಹೊರಡಲಿದ್ದೇವೆ. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ 5 ಸಾವಿರ ಕಾರ್ಯಕರ್ತರು ಬಸ್‌ಗಳ ಮುಖಾಂತರ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳಿದ್ದಾರೆ . ಕಾರ್ಯಕರ್ತರುಗಳಿಗೆ ಬಸ್ಸು , ತಿಂಡಿ , ಊಟದ ವ್ಯವಸ್ಥೆಯನ್ನು ಮಾಡಲಾಗಿದೆ . ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕಾರ್ಯಕರ್ತರುಗಳು , ಮುಖಂಡರು , ಪಕ್ಷದ ಅಭಿಮಾನಿಗಳು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದರು.
ಹೆಚ್ಚಿನ ಮಾಹಿತಿಗಾಗಿ : 9606231909 , 9449841009 , 9986041939 , 7795344852 ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಆರ್ . ಕ್ಷೇತ್ರದ ಅಧ್ಯಕ್ಷರಾದ ಶ ಬಿ.ಜೆ. ಸಂತೋಷ್ , ರಾಜ್ಯ ವಕ್ತಾರರಾದ ರವಿಚಂದ್ರೇಗೌಡ ಸೇರಿದಂತೆ ಇತರರು ಹಾಜರಿದ್ದರು.