ನಂದಿನಿ ಮೈಸೂರು
ಬಿಜೆಪಿ ಕಾರ್ಯಕರ್ತ ಮಣಿಕಂಠ ರಾಥೋಡ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ.
ಪ್ರಿಯಾಂಕ ಖರ್ಗೆಯನ್ನು ಗುಂಡಿಟ್ಟುಕೊಲ್ಲುತ್ತೇವೆ ಹೇಳಿಕೆ ಖಂಡಿಸಿ ಪ್ರತಿಭಟನೆ.
ಮೈಸೂರು, ನ.14- ದೇಶದ ಮುತ್ಸದ್ದಿ ರಾಜಕಾರಣಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಜ್ಯದ ರಾಜಕಾರಣಿ ಮಾಜಿ ಮಂತ್ರಿ ಹಾಲಿ ಶಾಸಕರು ಆಗಿರುವ ಪ್ರಿಯಾಂಕ ಖರ್ಗೆ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಕಾರ್ಯಕರ್ತ ಮಣಿಕಂಠ ರಾಥೋಡ್ ಖಂಡಿಸಿ ಪ್ರತಿಭಟನೆ ನಡೆಸಿದರು.
ಮೈಸೂರಿನ ಪುರಭವನದ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ದಲಿತ ಸಂಘಟನೆಗಳ ಒಕ್ಕೂಟ, ಅಖಿಲ ಕರ್ನಾಟಕ ಮಲ್ಲಿಕಾರ್ಜುನ ಅಭಿಮಾನಿಗಳ ಸಂಘ , ಪ್ರಗತಿಪರ ಸಂಘಟನೆಗಳು, ಪ್ರಿಯಾಂಕ ಖರ್ಗೆ ಅವರ ಅಭಿಮಾನಿಗಳು, ಅನುಯಾಯಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿ, ಆರ್ ಎಸ್ ಎಸ್, ಬಜರಂಗದಳ ಹಿಂದುಪುರ ಸಂಘಟನೆಗಳ ಕೈಗೊಂಬೆಯಾಗಿರುವ ಮಣಿಕಂಠ ರಾಥೋಡ್ ಇತ್ತೀಚಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಿಯಾಂಕ ಖರ್ಗೆ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ ಆತನ ವಿರುದ್ಧ ಪೊಲೀಸರು
ಸುಮೋಟೋ ಕೇಸ್ ದಾಖಲಿಸಿ ತಕ್ಷಣದಲ್ಲಿ ಬಂಧಿಸಬೇಕು, ಕೋಮು ಪ್ರಚೋದನೆ ನೀಡುತ್ತಿರುವ ಇವನ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು, ಬಿಜೆಪಿಯ ಕೈವಾಡವಿಲ್ಲದೆ ಇವರು ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ ಅದರಿಂದ ಈ ಹೇಳಿಕೆಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹೊಣೆಗಾರರಾಗುತ್ತಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ರಾಥೋಡ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬಂದ ಮೇಲೆ ದಲಿತರ ಮೇಲೆ ಶೋಷಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ, ಕೊಲೆ, ಸುಲಿಗೆ, ಅತ್ಯಾಚಾರಗಳು ನಡೆಯುತ್ತಿವೆ, ಸಾಹಿತಿ ಕಲಬುರ್ಗಿ, ಪತ್ರಕರ್ತ ಗೌರಿ ಲಂಕೇಶ್ ಅವರನ್ನು ಕೊಂದಿರುವ ಇವರು, ಈಗ ಪ್ರಿಯಾಂಕ ಖರ್ಗೆ ಅವರ ಮೇಲೆ ಕಣ್ಣಿಟ್ಟಿದ್ದಾರೆ, ಒಂದು ವೇಳೆ ಪ್ರಿಯಾಂಕ ಖರ್ಗೆ ಅವರ ಕೊಲೆ ಆದರೆ ರಾಜ್ಯದಲ್ಲಿ ಎರಡನೇ ಕೋರಂಗಂ ಯುದ್ಧ ನಡೆಯಬೇಕಾಗುತ್ತದೆ, ರಕ್ತಪಾತ ಕ್ರಾಂತಿ ನಡೆಯುತ್ತದೆ, ಪ್ರಿಯಾಂಕ ಖರ್ಗೆ ಹಿಂದೆ ರಾಜ್ಯಾದ್ಯಂತ ಕೋಟ್ಯಾಂತರ ಅಭಿಮಾನಿಗಳು ದಲಿತ ಪರ ಸಂಘಟನೆಗಳು ಇವೆ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಸರ್ಕಾರವನ್ನು ಎಚ್ಚರಿಸಿದರು.
ಪ್ರತಿಭಟನೆ ನೇತೃತ್ವವನ್ನು ನಗರ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ನರೇಂದ್ರ,ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ,ಜಿಲ್ಲಾ ಅಧ್ಯಕ್ಷ ಬಂಡಿಪಾಳ್ಯ ವಿಜಯಕುಮಾರ್, ಸೋಸಲೆ ಮಹೇಶ್, ರಮೇಶ್, ಸಿದ್ದ ಸ್ವಾಮಿ, ಮರಿದೇವರು,ಮಾನವ ಬಂಧುತ್ವ ವೇದಿಕೆ ಮುರುಡಗಳ್ಳಿ,ಮಹದೇವ್,ಡಿಎಸ್ ಎಸ್ ಜಿಲ್ಲಾ ಸಂಚಾಲಕ ಹರದನಹಳ್ಳಿ ರಾಜೇಶ್ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.