ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆ‌ ನಿರ್ಮಾಣ:ಶಾಸಕ ತನ್ವೀರ್ ಸೇಠ್

*ನಂದಿನಿ ಮೈಸೂರು*

ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆ‌ ನಿರ್ಮಾಣ:ಶಾಸಕ ತನ್ವೀರ್ ಸೇಠ್

ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಘೋಷಿಸಿದ್ದಾರೆ.

ಮೈಸೂರಿನ ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಜಂಟಿಯಾಗಿ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಆಚರಣೆ ವೇಳೆ ಮಾತನಾಡಿದ ಅವರು ಟಿಪ್ಪು ಈ ನಾಡಿನ ಸ್ವಾಭಿಮಾನದ ಸಂಕೇತ.
ಟಿಪ್ಪು ಜಯಂತಿ ಜಯಂತಿ ಜತೆ ಕನ್ನಡ ರಾಜ್ಯೋತ್ಸವವನ್ನೂ ಆಚರಿಸುತ್ತಿರುವುದು ಸಂತೋಷದ ವಿಚಾರ.
ನಾಡಿನ ಜನರನ್ನು ಒಟ್ಟಿಗೆ ಸೇರಿಸಲು, ಭಾವೈಕ್ಯತೆ ಮೂಡಿಸುವ ದೊಡ್ಡ ಶಕ್ತಿ ಟಿಪ್ಪು ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ.
ಇಸ್ಲಾಂನಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ
ಆದರೂ ಭಾವೈಕ್ಯತೆಯ ಸಂಕೇತವಾಗಿ ಟಿಪ್ಪುವಿನ 100 ಅಡಿ ಪ್ರತಿಮೆಯನ್ನು ಶ್ರೀರಂಗಪಟ್ಟಣ ಅಥವಾ ಮೈಸೂರು ನಗರದಲ್ಲಿ ನಿರ್ಮಿಸುತ್ತೇವೆ.
ಟಿಪ್ಪು ಹೆಸರಿಗೆ ಎಲ್ಲರನ್ನೂ ಒಟ್ಟು ಸೇರಿಸುವ ಶಕ್ತಿ ಇದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿದ್ದೇವೆ.ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಅನಾವರಣ ಬೆನ್ನಲ್ಲೇ ಟಿಪ್ಪು ಪ್ರತಿಮೆ ನಿರ್ಮಾಣದ ಘೋಷಣೆ ಮಾಡಿರುವ ಶಾಸಕ ತನ್ವೀರ್ ಸೇಠ್ ಭಾವೈಕ್ಯತೆಯ ಸಂಕೇತ ನಿರ್ಮಿಸುವರೇ ಕಾದಷ್ಟೇ ನೋಡಬೇಕಿದೆ.

Leave a Reply

Your email address will not be published. Required fields are marked *