ನಂದಿನಿ ಮೈಸೂರು
ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2022 ಅಂಗವಾಗಿ ಮೈಸೂರು
ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮನೆ ಮನೆ ಗೊಂಬೆ ದಸರಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮೈಸೂರಿನ ವಾರ್ಡ್ ನಂ 61 ರಲ್ಲಿ ಗೊಂಬೆ ಕೂರಿಸುವ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆದ ದಾಕ್ಷಾಯಣಿರವರಿಗೆ ನಗರ ಪಾಲಿಕೆ ಸದಸ್ಯರಾದ ಶೋಭಾ ಸುನೀಲ್ ರವರು ಬಹುಮಾನ ವಿತರಿಸಿದರು.
ನಂತರ ಮಾತನಾಡಿದ ಅವರು ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲಿಕೆಯಿಂದ
ಮಕ್ಕಳಿಗೆ, ಮಹಿಳೆಯರಿಗೆ,ಹಿರಿಯ ನಾಗರೀಕರಿಗೆ ಸ್ಪರ್ದೇ ಏರ್ಪಡಿಸಲಾಗಿತ್ತು.ಸ್ಪರ್ದೇಯಲ್ಲಿ ಗೆದ್ದತಂಹವರಿಗೆ ಸ್ಥಳದಲ್ಲಿಯೇ ಬಹುಮಾನ ನೀಡಿದ್ದೇವೆ.ಮನೆ ಮನೆ ಬೊಂಬೆ ಕೂರಿಸುವ ಸ್ಪರ್ದೇಯಲ್ಲಿ 61ನೇ ವಾರ್ಡಿನ ನಿವಾಸಿ ನಿವೃತ್ತ ಮುಖ್ಯಶಿಕ್ಷಕಿ ದಕ್ಷಾಯಿಣಿರವರಿಗೆ ಮೊದಲ ಬಹುಮಾನ ದೊರೆತಿದೆ.ಗೊಂಬೆ ಕೂರಿಸುವುದರ ಜೊತೆಗೆ ಯುವಸಮೂಹಕ್ಕೆ ಮಾಹಿತಿ ನೀಡಿದ್ದಾರೆ ಎಂದರು.
ಮೊದಲ ಬಹುಮಾನ ಪಡೆದ ದಾಕ್ಷಾಯಿಣಿರವರು ಮಾತನಾಡಿ ಹಿಂದಿನ ಕಾಲದಿಂದಲೂ ದಸರಾ ಸಂದರ್ಭದಲ್ಲಿ ಗೊಂಬೆ ಕೂರಿಸುವುದು ನಮ್ಮ ಸಂಪ್ರದಾಯವಾಗಿದೆ.ಪ್ರತಿ ವರ್ಷ ಗೊಂಬೆ ಜೋಡಣೆ ಮಾಡಿ ಪೂಜೆ ಸಲ್ಲಿಸುತ್ತಿದ್ದೇವೆ.ಗೊಂಬೆ ಕೂರಿಸುವುದು ಸುಲಭದ ಮಾತಲ್ಲ .ಆ ಕೆಲಸ ಒಬ್ಬರಿಂದ ಆಗದು.ನನ್ನ ಸೊಸೆ,ಮಗ,ಮಕ್ಕಳು ,ಮೊಮ್ಮೊಕ್ಕಳು ಎಲ್ಲಾ ಸೇರಿ ಗೊಂಬೆ ಕೂರಿಸಿದೇವು.ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶೋಭಾ ಸುನೀಲ್ ದಂಪತಿ ನಮ್ಮನನ್ನ ಗುರುತಿಸಿ ಮೊದಲ ಬಹುಮಾನ ನೀಡಿರುವುದು ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಸುನೀಲ್, ವಕೀಲರಾದ ಶ್ರೀನಿವಾಸ್,ಧರ್ಮೇಂದ್ರ,ಕೃಷ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.