ಮೈಸೂರು:7 ಆಗಸ್ಟ್ 2022
ನಂದಿನಿ ಮೈಸೂರು
ಇಂದಿನಿಂದ ಆಗಸ್ಟ್ 26ರ ತನಕ
ನಡೆಯಲಿರುವ ಮಹಾರಾಜ ಟ್ರೋಫಿ'(ಕರ್ನಾಟಕ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ದೊರೆಯಿತು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿರುವ ಕ್ರೀಕೆಟ್ ಪಂದ್ಯಾವಳಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.
ಈ ವೇಳೆ ೬ ತಂಡದ ನಾಯಕರಿಗೆ ಶುಭಕೋರಿದರು.
ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್ ನಡುವೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ತಂಡದ ನಾಯಕ ಆರ್.ಸರ್ಮಥ್ 41 ಬಾಲಿಗೆ 57 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೊತೆಗೆ ನಿತೀನ್ 23,ಅಭಿನವ್ 25 ರನ್ ಗಳ ಕಾಣಿಕೆ ನೀಡಿದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಂಗಳೂರು ತಂಡಕ್ಕೆ ವಿಜಯ್ ಕುಮಾರ್ ವೈಶಾಖ್, ಎಚ್.ಎಸ್.ಶರತ್ ಅವರ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದರಲ್ಲದೆ ತಲಾ ಎರಡು ವಿಕೆಟ್ ಉರುಳಿಸಿದರು. ಹುಬ್ಬಳ್ಳಿಗೆ ಲಿಯಾನ್ ಖಾನ್ (34), ತುಷಾರ್ ಸಿಂಗ್ (34) ಅಬ್ಬರದಾಟ ಪ್ರದರ್ಶಿಸಿ ನೆರವಾದರು.
ಹುಬ್ಬಳ್ಳಿಯ ಇನಿಂಗ್ಸ್ ಮುಗಿದ ಕೂಡಲೇ ಮಳೆ ಪಂದ್ಯಕ್ಕೆ ಅಡ್ಡಿ
ಮತ್ತೆ ಆರಂಭವಾದ ಪಂದ್ಯಕ್ಕೆ 18 ಓವರ್‌ಗಳಲ್ಲಿ 112 ರನ್ (ವಿಜೆಡಿ ನಿಯಮದಡಿ) ಗುರಿಯನ್ನು ಮಂಗಳೂರಿಗೆ ನೀಡಲಾಯಿತು.
ಹುಬ್ಬಳ್ಳಿಯ ನಾಯಕ ಅಭಿಮನ್ಯು ಮಿಥುನ್ ಹೊರತು ಪಡಿಸಿ ವಿ.ಕೌಶಿಕ್, ಝೋಹಾರ್ ಫಾರೂಖಿ, ಎಂ.ಜಿ.ನವೀನ್ ಸೇರಿದಂತೆ ಎಲ್ಲ ಬೌಲರ್‌ಗಳನ್ನು ಆರ್.ಸಮರ್ಥ್ ದಂಡಿಸಿದರು. 2 ವಿಕೆಟ್ ನಷ್ಟಕ್ಕೆ 114 ರನ್‌ಗಳಿಸಿದ ಮಂಗಳೂರು ಯುನೈಟೆಡ್ ಗೆಲುವಿನ ನಗೆ ಬೀರಿತು. ಸಮರ್ಥ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.