ವಿದ್ಯಾರ್ಥಿಯ ಬೈಕ್ ಕ್ರೇಜ್; ಬೈಕ್ ಗೂ ಬರ್ತ್ ಡೇ ಮಾಡಿದ ಯುವಕ ಸೆಲೆಬ್ರೆಷನ್ ವಿಡಿಯೋ ವೈರಲ್

41 Views

ಕೊಪ್ಪಳ:7 ಆಗಸ್ಟ್ 2022

ನಂದಿನಿ ಮೈಸೂರು

ಯಮಹಾ Rx ಬೈಕ್ ಕ್ರೇಜ್ ನಿಂದ ವಿದ್ಯಾರ್ಥಿಯೊಬ್ಬ ಬೈಕ್ ಗೆ ಹುಟ್ಟುಹಬ್ಬ ಆಚರಿಸಿದ್ದಾನೆ. ಬೈಕ್ ಮೂಲಕವೇ ಕೇಕ್ ಕತ್ತರಿ ಸೆಲೆಬ್ರೇಷನ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿಯ ವಿದ್ಯಾರ್ಥಿ‌ ವಿರೇಶ ವಿಭಿನ್ನವಾಗಿ ಬೈಕ್ ಕ್ರೇಜ್ ನ ಎಂಥದ್ದು ಅನ್ನೋದನ್ನ ತೋರಿಸಿದ್ದಾನೆ. ವಿರೇಶ ಯಮಹ ಆರ್ ಎಕ್ಸ್ ಬೈಕ್ ಖರೀದಿ ಮಾಡಿ ನಿನ್ನೆಗೆ ಒಂದು ವರ್ಷ ಆಗಿದ್ದರಿಂದ ಸೆಲೆಬ್ರೇಷನ್ ಮಾಡಿದ್ದಾನೆ. ‌

ಒಟ್ಟು 50 ಸಾವಿರ ರೂಪಾಯಿ ಕೊಟ್ಟು ಬೈಕ್ ಖರೀದಿ ಮಾಡಿದ್ದ ವಿರೇಶ ಪ್ಯಾರ ಮೆಡಿಕಲ್ ಓದುತ್ತಿದ್ದಾನೆ.‌ ತನ್ನ ಸೆಕೆಂಡ್ ಹ್ಯಾಂಡ್ ಬೈಕ್ ಗೆ ಡಾರ್ಲಿಂಗ್ ಅಂತಾ ಹೆಸರಿಟ್ಟಿರೋ ವಿರೇಶ, ಬೈಕ್ ನಿಂದಲೇ ಕೇಕ್ ಕಟ್ ಮಾಡಿಸಿರುವ ವೀಡಿಯೋ ಭಾರಿ ವೈರಲ್ ಆಗಿದೆ. ಇನ್ನು ಬೈಕ್‌ ತನ್ನ ಕಡೆ ಬಂದು ಒಂದು ವರ್ಷ ಆಗಿದ್ದರಿಂದ ಸ್ನೇಹಿತರಿಗೆ ಬಿಂದಾಸ್ ಪಾರ್ಟಿ ಕೂಡ ಕೊಟ್ಟಿದ್ದಾನೆ.

 

Leave a Reply

Your email address will not be published.