4372 ದಿವಸಗಳ ಕಾಲ ಮಹಾಯಜ್ಞ ಕಾರ್ಯಕ್ರಮ

 

ಮೈಸೂರು:11 ಮೇ 2022

ನಂದಿನಿ ಮೈಸೂರು

ಶ್ರೀ ವಿಶ್ವಮಂಗಳ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನವು, ಮೈಸೂರು ನಗರದ ಹೊರವಲಯದಲ್ಲಿ (ಕೆ.ಆರ್. ಎಸ್. ರಸ್ತೆಯಲ್ಲಿನ ಬೆಳಗೊಳ ಗ್ರಾಮದ ಹತ್ತಿರ) ಸ್ಥಾಪಿತವಾಗಿದ್ದು, ಅತ್ಯಂತ ರಮಣೀಯ ಹಾಗೂ ಪವಿತ್ರವಾದ ತಾಣವಾಗಿದೆ. ಪ್ರಕೃತ, ಈ ದೇವಸ್ಥಾನದ ವತಿಯಿಂದ ದಿನಾಂಕ: 13-05-2022ರಿಂದ 01-05-2034ರ ವರೆಗೆ (4372 ದಿವಸಗಳ ಕಾಲ) ನಡೆಯುವ ಅತ್ಯಂತ ವಿಸ್ತೃತವಾದ ಹಾಗೂ ಅಭೂತಪೂರ್ವವಾದ ನಿತ್ಯಮಹಾಯಜ್ಞ-ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು ಶ್ರೀರಂಗಪಟ್ಟಣ ತಾಲೂಕು ಬೆಳವಾಡಿಯಲ್ಲಿನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇದೇ ಮೇ ೧೩ ರಿಂದ ಸುಮಾರು ೪,೩೭೨ ದಿನಗಳ ಕಾಲ ದೇಶ ಹಾಗೂ ಜಗತ್ತಿನ ಎಲ್ಲ ಜನರ ಸುಖ, ನೆಮ್ಮದಿಗೆ ಪ್ರಾರ್ಥಿಸಿ ನಿತ್ಯ ಮಹಾಯಜ್ಞ ಆಯೋಜಿಸಲಾಗಿದೆ

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಷ್ಟು ದೀರ್ಘ ಕಾಲದ ಯಜ್ಞವನ್ನು ಇದುವರೆಗೆ ಯಾರೂ ಸಹಾ ಆಯೋಜಿಸಿರುವ ದಾಖಲೆಯಿಲ್ಲ. ಹೀಗಾಗಿ ಇದೇ ಪ್ರಥಮವಾಗಿದೆ. ಜೊತೆಗೆ ಆರಂಭದ ದಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗಮಿಸಿ ಉದ್ಘಾಟಿಸಲಿದ್ದಾರೆ.
ಅಲ್ಲದೆ, ಬಳಿಕ ದೇಶದ ಎಲ್ಲ ಪಂಗಡಗಳಿಗೆ ಸೇರಿದ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಮಠಾಧಿಪತಿಗಳು ಸಹಾ ಆಗಮಿಸಿ, ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜೊತೆಗೆ, ತಮ್ಮ ಸಮಿತಿ ವತಿಯಿಂದ ಬೆಳಗೊಳದಲ್ಲಿನ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದರೊಡನೆ ಇನ್ನಿತರ ಸಮಾಜ ಸೇವಾ ಕಾರ್ಯಕ್ರಮ ಸಹಾ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಕಾರ್ಯಕ್ರಮವನ್ನು, ಈ ದೇವಸ್ಥಾನವನ್ನು ನಡೆಸುವ, ಲಕ್ಷ್ಮೀನರಸಿಂಹ-ಕೋಟಿ-ಮಹಾಯಜ್ಞವೇ ಮೊದಲಾದ ಅನೇಕ ಬೃಹತ್ಕಾರ್ಯಕ್ರಮಗಳನ್ನು ನಡೆಸಿ, ಅಪಾರವಾದ ಅನುಭವವನ್ನು ಪಡೆದಿರುವ ಶ್ರೀ ಲಕ್ಷ್ಮೀ ನರಹರಿ ಸೇವಾ ಟ್ರಸ್ಟ್ – ಸಂಸ್ಥೆಯ ವತಿಯಿಂದ ನಡೆಸಲಾಗುವುದು.

ನಮ್ಮ ಪ್ರಾಚೀನ ಇತಿಹಾಸ-ಪುರಾಣಗಳ ಪ್ರಕಾರ, ವೇದ ಕಾಲದಲ್ಲಿ 12 / 24 ವರ್ಷಗಳ ಕಾಲ ದೀರ್ಘಸತ್ರವೆಂಬ ಹೆಸರಿನಲ್ಲಿ ಇಂತಹ ಮಹಾಯಜ್ಞಗಳನ್ನು ಆಯೋಜಿಸಲಾಗುತ್ತಿತ್ತು. ಈಗ್ಗೆ, 700 ವರ್ಷಗಳ ಇತಿಹಾಸದಲ್ಲಿ ಇಂತಹ ದೀರ್ಘಕಾಲ ನಡೆಯುವ ಯಜ್ಞವನ್ನು ಹಮ್ಮಿಕೊಳ್ಳಲಾಗಿರುವುದಿಲ್ಲವೆಂದು ತಿಳಿದುಬರುತ್ತದೆ. ಈ ಯಜ್ಞವನ್ನು ನಾಲ್ಕೂ ವೇದಗಳಿಗೆ ಸೇರಿದ ಭಾರತದ ಎಲ್ಲಾ ಭಾಗಗಳಿಂದ ಆಗಮಿಸುವ ಋತ್ವಿಜರ ಸಮೂಹಗಳಿಂದ ನಡೆಸಲಾಗುವುದು. ಸಮಸ್ತ ಲೋಕಕಲ್ಯಾಣಕ್ಕಾಗಿಯೂ, ಪ್ರಪಂಚದಲ್ಲಿನ ನೈಸರ್ಗಿಕ ಉತ್ಪಾತಾದಿಗಳಿಂದ ರಕ್ಷಣೆಗಾಗಿಯೂ, ಜಗತ್ತಿನೆಲ್ಲೆಡೆ ಹರಡಿರುವ ದ್ವೇಷಾಸೂಯಾದಿಗಳನ್ನು ನಿವಾರಿಸಿ, ಸುಖ-ಸಮೃದ್ಧಿ-ಶಾಂತಿಗಳನ್ನು ಉಂಟುಮಾಡುವುದಕ್ಕಾಗಿಯೂ ಈ ಯಜ್ಞವನ್ನು ಆಯೋಜಿಸಲಾಗಿದೆ. ಇದಲ್ಲದೆ, ಈ ಯಜ್ಞವು, ಯಾವುದೇ ರಾಷ್ಟ್ರೀಯತೆ-ಜಾತಿ-ಮತ-ಕುಲ-ವಯಸ್ಸು-ಲಿಂಗ ಮುಂತಾದ ಭೇದಗಳಿಲ್ಲದೆ ಯಾರು ಬೇಕಾದರೂ ಈ ಯಜ್ಞದಲ್ಲಿ ಭಾಗವಹಿಸಬಹುದಾಗಿದ್ದು, ಅವರವರ ಇಷ್ಟಕ್ಕನುಗುಣವಾಗಿ ಜೀವನದಲ್ಲಿ ಆಯುರಾರೋಗ್ಯೈಶ್ವರ್ಯಾದಿಗಳನ್ನು, ವಿವಾಹ, ವೈವಾಹಿಕ ಜೀವನ, ಸಂತಾನ, ವ್ಯಾಪಾರದಲ್ಲಿ ಅಭಿವೃದ್ಧಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ ಹಾಗೂ ಎಲ್ಲ ವಿಧವಾದ ಐಹಿಕ-ಪಾರಲೌಕಿಕ ಫಲಗಳನ್ನು ಪಡೆದು ಕೃತಾರ್ಥರಾಗಲು, ಒಳ್ಳೆಯ ಅವಕಾಶವಾಗಿದೆ.

ಈ ಸಂದರ್ಭದಲ್ಲಿ, ವೇದಗಳ ನಿರಂತರ ಪಾರಾಯಣ, ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಪವಿತ್ರ ಗ್ರಂಥಗಳ ಪಠನ ಮತ್ತು ನಿತ್ಯ-ಅನ್ನದಾನ ಮುಂತಾದವುಗಳನ್ನು ಆಯೋಜಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಮೊಬೈಲ್ – +919343129495 / 98
ಜಾಲತಾಣ – Shree lakshinarasimha-ksehtram” – ಯೂಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್, ಇನ್ಟಾಗ್ರಾಮ್, ಅಥವಾ www.lakshmi-narasimha.org

ಸುದ್ದಿಗೋಷ್ಟಿಯಲ್ಲಿ ಡಾ.ಎಂ.ಎ.ಆಳ್ವಾರ್,ಸಂತೋಷ್ ಹಾಜರಿದ್ದರು.

Leave a Reply

Your email address will not be published. Required fields are marked *