ನಂದಿನಿ ಮೈಸೂರು
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಳಗದ ವತಿಯಿಂದ ಮಡಿವಾಳ ಮಾಚೀದೇವರ ಜಯಂತೋತ್ಸವ ಹಾಗೂ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಮೈಸೂರಿನ ಶ್ರೀರಾಂಪುರ 2ನೇ ಹಂತ ಅಶೋಕಪುರಂ ರೈಲ್ವೆ ನಿಲ್ದಾಣದ ಎದುರಿನಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ
ಚಿತ್ರದುರ್ಗ ಮಡಿವಾಳ ಗುರುಪೀಠ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ದೀಪ ಬೆಳಗಿಸಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೈಸೂರು ಜಿಲ್ಲೆ ಹಾಗೂ ವರುಣ ವಿಧಾನಸಭಾ ಕ್ಷೇತ್ರದ
ಮಡಿವಾಳ ಸಮುದಾಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಳಗದ ವತಿಯಿಂದ ಸಮುದಾಯದ ಪ್ರತಿಭಾವಂತ ಮಕ್ಕಳನ್ನ ಗುರುತಿಸಿ ಗೌರವಿಸಿ ಸನ್ಮಾನಿಸುವ ಮೂಲಕ ಸಮುದಾಯದ ಒಗ್ಗಟ್ಟಿಗೆ ಮುಂದಾಗಿರುವ ಪ್ರತಿಯೊಬ್ಬರಿಗೂ ಅಭಿನಂದಿಸುತ್ತೇನೆ. ಈ ಮೂಲಕ ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಿರುವುದು ಸಂತಸದ ವಿಷಯ ಎಂದರು.
ತದ ನಂತರ ಮಡಿವಾಳ ಸಮುದಾಯದ ಮುಖಂಡರು,ಆರ್.ಕೆ.ಬಿಲ್ಡರ್ಸ್ ಅಂಡ್ ಡೆವರಲಪರ್ಸ್ ಆದ
ಎ ಎಸ್ ರವಿಕುಮಾರ್ ಮಾತನಾಡಿ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಗೌರವಿಸುವುದು, ಸಮುದಾಯದ ಒಗ್ಗಟ್ಟಿಗೆ ದುಡಿಯುವುದು ನನ್ನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವರುಣ ವಿಧಾನಸಭಾ ಕ್ಷೇತ್ರ ಯುವ ಮುಖಂಡರಾದ
ಸಂತೋಷ್ ಕಿರಾಳು ಮಾತನಾಡಿ ಮಡಿವಾಳ ಸಮಾಜದಲ್ಲಿ ಪ್ರತಿಭಾನ್ವಿತ ಮಕ್ಕಳಿದ್ದಾರೆ.ಅವರಿಗೆ ಪ್ರೋತ್ಸಾಹಿಸುವ ಉದ್ದೇಶ ನಮ್ಮದಾಗಿದೆ.ಸಮುದಾಯದ ಕಾರ್ಯಕ್ರಮಗಳಿಗೆ ರಾಜಕೀಯ ನಾಯಕರೂ ಆಗಮಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕರಾದ ಶಂಕರ್ ದೇವನೂರು, ಪ್ರೋ.ಎಸ್.ಶಿವರಾಜಪ್ಪ,
ತಗಡೂರು ಮಹೇಶ್,ಸಿ ಎಸ್ ಮಹೇಶ್, ವೆಂಕಟೇಶ್, ಮಹೇಶ್ ಕೆ ಎಸ್,ರವಿ ಚಿಲಕುಂದ,ರಘು ರಾಮನಹಳ್ಳಿ,ರಾಮಚಂದ್ರ,ರಘು,ಮಹೇಶ್,ವೆಂಕಟೇಶ ಗುಂಡಣ್ಣ,ಬಸವರಾಜು,ಜಯಲಕ್ಷ್ಮಿ ಕೋಮಲ,ರಾಜೇಶ್,ಮಂಜುನಾಥ್ ಮರಳಗಾಲ,ಶ್ರೀನಿವಾಸ್ ಸಿದ್ದಲಿಂಗಪ್ಪ ಸೇರಿದಂತೆ ಹಲವು ಮುಖಂಡರು ಸಮುದಾಯದವರು ಉಪಸ್ಥಿತರಿದ್ದರು.