ವಿಜಯ ಸ್ವರ್ಣ ಭಾರತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಲೋಗೋ ಅನಾವರಣ

ನಂದಿನಿ ಮೈಸೂರು

*ವಿಜಯ ಸ್ವರ್ಣ ಭಾರತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಲೋಗೋ ಅನಾವರಣ*

ಮೈಸೂರು: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರಾದ ಕೋಟದಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿರುವ ವಿಜಯ ಸ್ವರ್ಣ ಭಾರತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಇದರ ಲೋಗೋ ಅನಾವರಣ ಕಾರ್ಯಕ್ರಮವು ಜನವರಿ 23 ರಂದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಯಲ್ಲಿ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿ ಆಶೀರ್ವಾದಿಸಿದರು.
ಜ.26 ರಿಂದ ಜ.31ರ ವರೆಗೆ ಶ್ರೀ ಮಠದಲ್ಲಿ ನಡೆಯುವ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಬರುವ ಭಕ್ತರಿಗಾಗಿ ವಿಜಯ ಸ್ವರ್ಣ ಭಾರತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಸಂಸ್ಥೆಯು ಮಠದ ಪೀಠಾಧಿಪತಿಗಳ ಭಾವಚಿತ್ರವುಳ್ಳ 2025ರ ಕ್ಯಾಲೆಂಡರ್ ನ್ನು ಸುತ್ತೂರು ಕ್ಷೇತ್ರದ ಮಠಾಧೀಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಅನಾವರಣಗೊಳಿಸಿ ಮಾತನಾಡಿ, ಈ ನಿಮ್ಮ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾಗಿ ಸೇವೆ ನೀಡುವ ಮೂಲಕ ಗ್ರಾಹಕರ ಮನಮುಟ್ಟಿ ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಠದ ಮುಖ್ಯಸ್ಥರು, ಸಿಬ್ಬಂದಿಗಳು, ವಿಜಯ ಸ್ವರ್ಣ ಭಾರತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಸಂಸ್ಥೆಯ ಮುಖ್ಯಸ್ಥರಾದ ರಜನಿಕಾಂತ್ ಮೈಸೂರು, ರಮೇಶ್ ಪೂಜಾರಿ ಕುಂದಾಪುರ, ಅಕ್ಷಯ ಪೂಜಾರಿ ಕುಂದಾಪುರ, ಸ್ಥಳೀಯರಾದ ಮೂಗೇಗೌಡ, ರಾಜೇಂದ್ರ, ನಾಗೇಂದ್ರ, ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *