ನಂದಿನಿ ಮೈಸೂರು
ಸ್ವಚ್ಛ ಭಾರತ ಅಭಿಯಾನ ಗಾಂಧೀಜಿಯವರ ಕನಸಾಗಿದ್ದು ಅವರ ಹಾದಿಯಲ್ಲಿಯೇ
ಸ್ವಚ್ಛತಾ ದಿವಸ್ ಪ್ರಯುಕ್ತ ವಕೀಲರು ಮಾಡಿದರು.
ಮೈಸೂರು ಜಿಲ್ಲಾ ಸತ್ರ ನ್ಯಾಯಾಲಯ ಕಟ್ಟಡ ಮತ್ತು ಹೊಸ ನ್ಯಾಯಾಲಯದ ಆವರಣದಲ್ಲಿ ಸರ್ಕಾರದ ಆದೇಶದ ಮೇರೆಗೆ ಇಂದು ಸ್ವಚ್ಚತಾ ಕಾರ್ಯಕ್ರಮಕ್ಕೆ ಪ್ರಭಾರ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಪುಟ್ಟಸ್ವಾಮಿರವರು ಸ್ವಚ್ಛತೆ ಮಾಡುವ ಮೂಲಕ ಚಾಲನೆ ನೀಡಿದರು.
ನಮ್ಮ ಸುತ್ತಮುತ್ತಲಿನ ಪ್ರದೇಶವನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ.
ಪ್ರತಿಯೊಬ್ಬರೂ ಸಹ ಈ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗಿ.ದೇಶದ ಸ್ವಚ್ಛತೆಗೆ ಎಲ್ಲರು ಸಹ ಕೈ ಜೋಡಿಸೋಣ.ಸಾಂಕ್ರಾಮಿಕ ರೋಗಗಳನ್ನ ದೂರವಿಡೋಣ ಎಂದು ಪುಟ್ಟಸ್ವಾಮಿ ತಿಳಿಸಿದರು.
ನಂತರ ಪ್ರಧಾನ ಕಾರ್ಯದರ್ಶಿ ಉಮೇಶ್.ಎಸ್ ಹಾಗೂ ಉಪಾಧ್ಯಕ್ಷ ಪುಟ್ಟಸಿದ್ದೇಗೌಡರವರು ಮಾತನಾಡಿ ಸ್ವಚ್ಚತಾ ಅಭಿಯಾನ ಒಂದು ದಿನಕ್ಕೆ ಸೀಮಿತವಾಗಬಾರದು. ವಕೀಲರ ಸಂಘದಲ್ಲಿ ಪ್ರತಿ ತಿಂಗಳು ಒಂದು ದಿನ ಸ್ವಚ್ಚತೆ ಮಾಡಲು ನಿರ್ಧರಿಸಿದ್ದೇವೆ.ಸ್ವಚ್ಚತೆ ಬರಿ ನಾವಿರುವ ಜಾಗ ಮಾತ್ರ ಸ್ವಚ್ಚಗೊಳಿಸುವುದರ ಜೊತೆಗೆ ಸಮಾಜದಲ್ಲಿರುವ ಭ್ರಷ್ಟಾಚಾರದ ಕೊಳೆಯನ್ನು ಕೂಡ ತೊಳೆಯಬೇಕಿದೆ.ಅದಲ್ಲದೇ ಸರ್ಕಾರ ಪೌರಕಾರ್ಮಿಕರ ಸಮಸ್ಯೆ ಆಲಿಸಬೇಕು.ಜನರು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್,ಸಿವಿಲ್ ನ್ಯಾಯಾಧೀಶರಾದ ರಶ್ಮಿ, ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ,ಜಂಟಿ ಕಾರ್ಯದರ್ಶಿ ನಾಗೇಶ್
ಸೇರಿದಂತೆ ನ್ಯಾಯಾಧೀಶರು, ವಕೀಲರು,ನ್ಯಾಯಾಲಯ ಸಿಬ್ಬಂದಿಗಳು ಮತ್ತಿತರರು ಭಾಗಿಯಾಗಿದ್ದರು.