ನಂದಿನಿ ಮೈಸೂರು
*ಜನಪರ ಕಾರ್ಯಕ್ರಮಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ಎಲ್ ನಾಗೇಂದ್ರ*
ಮೈಸೂರು: ಡಬಲ್ ಇಂಜಿನ ಸರಕಾರಗಳ ನೂರಾರು ಅಭಿವೃದ್ಧಿ ಕಾರ್ಯಕ್ರಮಗಳು ಕ್ಷೇತ್ರದ ಜನರನ್ನು ತಲುಪಿದ್ದು ಈ ಬಾರಿ ಚಾಮರಾಜ ಮತಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಲ್ಲಿ ಜನ ನನ್ನನ್ನು ಗೆಲ್ಲಿಸಲಿದ್ದಾರೆಂದು ಬಾಜಪ ಅಭ್ಯರ್ಥಿ ಎಲ್ ನಾಗೇಂದ್ರ ಹೇಳಿದರು. ಅವರು ಜಯ ಲಕ್ಷ್ಮಿಪುರಂನಲ್ಲಿರುವ ಪ್ರೀಮಿಯರ್ ಮೆಟ್ರೋ ಪಾಲಿಸ್ ಅಪಾರ್ಟ್ಮೆಂಟ್ ನಲ್ಲಿ
ಶಾಸಕರಾದ ಎನ್ ನಾಗೇಂದ್ರ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್ ಮನೆಮನೆಗೆ ತೆರಳಿ ಮತ ಯಾಚಿಸಿದರು
ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕಾರ್ಯಕರ್ತರೊಂದಿಗೆ ಪಾದಯಾತ್ರೆಯ ಮೂಲಕ ಮನಮನೆಗೆ ತೆರಳಿ ಪ್ರಚಾರ ನಡೆಸಿದರು. ಬಿಜೆಪಿ ಪಕ್ಷದ ಸಾಧನೆಗಳನ್ನು ವಿವರಿಸಿ ಮೇ ರಂದು ನಡೆಯುವ 10 ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಆಶೀರ್ವದಿಸಿ ನಿಮ್ಮ ಮನೆಯ ಮಗನಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವದಾಗಿ ವಿನಂತಿಸಿದರು.
ನಂತರ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮಾನಂದೀಶ್
*ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳು ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿವೆ* ,
ನೀಡಿದ ಭರವಸೆಗಳಿಗಿಂತ ಹೆಚ್ಚು ಯೋಜನೆಗಳನ್ನು ಬಿಜೆಪಿ ಜಾರಿಗೊಳಿಸಿದೆ. ಚುನಾವಣೆಯಲ್ಲೂ ಮಹಿಳೆಯರಿಗೆ ಆದ್ಯತೆ ನೀಡಿದ್ದು,
ಬಿಜೆಪಿ ಮಹಿಳೆಯರನ್ನು ಸಬಲಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ 43 ಲಕ್ಷ ನಲ್ಲಿ ನೀರು ಸಂಪರ್ಕ, ಸ್ವಚ್ಛ ಭಾರತ್ ಯೋಜನೆ, ಬಯಲು ಶೌಚ ನಿರ್ಮೂಲನೆ, ಉಜ್ವಲ ಯೋಜನೆ, ಪಿಎಂ ಸುರಕ್ಷಿತ ಮಾತೃತ್ವ ಅಭಿಯಾನ, ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಮಾತೃ ವಂದನಾ ಕಾರ್ಯಕ್ರಮ ಹೀಗೆ ಹತ್ತಾರು ಯೋಜನೆಗಳ ಮೂಲಕ ಮಹಿಳೆಯರ ಮನಗೆದ್ದಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ಚೈತ್ರ ಚೌಡಪ್ಪ, ಪ್ರಮೋದಿನಿ ಗೀತಾ, ಪುಟ್ಟಸ್ವಾಮಿ ,ಜಯಂತ್, ಜಯಶ್ರೀ ಹಾಗೂ ಇನ್ನಿತರರು ಹಾಜರಿದ್ದರು.