ಕನ್ನಡ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು : ಸಿಪಿಕೆ

ನಂದಿನಿ ಮೈಸೂರು

ಕನ್ನಡ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ಕವಿ ಕುವೆಂಪು ಡಾ. ಸಿಪಿಕೆ

ಕುವೆಂಪು ಅವರ ವೈಚಾರಿಕತೆ ವೈಜ್ಞಾನಿಕ ಮನೋಭಾವ ಜಾತ್ಯಾತೀತ ಪರಿಕಲ್ಪನೆಗಳು ರಾಜ್ಯದ ಪ್ರಗತಿಗೆ ಅಮೂಲ್ಯ ಕಾಣಿಕೆ ನೀಡಿವೆ. ಸಾಹಿತ್ಯದ ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿ ಮತ್ತು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ದೊಡ್ಡ ಕಾಣಿಕೆ ನೀಡುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಕನ್ನಡ ವಿಶ್ವ ಮಾನ್ಯತೆಗೆ ತಂದು ಕೊಟ್ಟ ಕವಿ ಕುವೆಂಪು ಎಂದು ಹಿರಿಯ ವಿದ್ವಾಂಸರಾದ ಡಾಕ್ಟರ್ ಸಿಪಿಕೆ ರವರು ಅಭಿಪ್ರಾಯಪಟ್ಟರು.

ಮೈಸೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ನೇತೃತ್ವದಲ್ಲಿ ಆಯೋಜಿಸಿದ್ದ ಕುವೆಂಪುರವರ 119ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಡಾಕ್ಟರ್ ಸಿಪಿಕೆ ರವರು ವರ್ತಮಾನದ ಕನ್ನಡದ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರಗಳಿವೆ ಕನ್ನಡ ನಾಡಿನಲ್ಲಿ ಕನ್ನಡಿಗರ ಬದುಕು ಹಸನಾಗಲಿಕ್ಕೆ ಅವರು ನೀಡಿರುವ ವಿಶ್ವಮಾನವ ಸಂದೇಶ ಮಹತ್ವದ ಮೈಲಿಗಲ್ಲಾಗಿದೆ ಕುವೆಂಪುರವರು ಕುವೆಂಪುರವರದು ಮಕ್ಕಳ ಸಾಹಿತ್ಯದಿಂದ ಮಹಾಕಾವ್ಯದವರೆಗೆ ವಿಸ್ತರಿಸಿದ್ದು ಬಹುಮುಖ ನೆಲೆಗಳಲ್ಲಿ ನಿಂತಿವೆ ಹಾಗೂ ಆ ಮೂಲಕ ಬಹು ಮುಖ್ಯ ಸಾಹಿತ್ಯದ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.

ನಂತರ ಮೈಸೂರು ಕನ್ನಡ ಸಾಹಿತ್ಯ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ ಗೋಪಾಲ್ ರವರು ಮಾತನಾಡಿ ಕುವೆಂಪುರವರು ಕನ್ನಡ ನಾಡಿಗೆ ನಾಡಗೀತೆ ಗೀತೆ ಮತ್ತು ರೈತ ಗೀತೆಯನ್ನು ಕೊಟ್ಟ ಮೊದಲ ಕವಿ. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಏಕೈಕ ಕವಿ ನಮ್ಮ ಕನ್ನಡ ನಾಡಿನ ಕುವೆಂಪುರವರು ಎಂದು ತಿಳಿಸಿದರು ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕುವೆಂಪುರವರು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಬೇಕೆಂದು ಕರೆಕೊಟ್ಟು ಆ ದಿಶೆಯಲ್ಲಿ ಕಾವ್ಯ ಭೂಮಿಯಲ್ಲಿ ಪರಿಶ್ರಮಿಸಿದವರು ಕುವೆಂಪು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾವಲು ಪಡೆಯ ಅಧ್ಯಕ್ಷರಾದ ಶ್ರೀ ಮೋಹನ್ ಕುಮಾರ್ ಗೌಡರವರು ಸಂಸ್ಕೃತಿ ಪೋಷಕರಾದ ಡಾ. ರಘುರಾಮ ವಾಜಪೇಯಿರವರು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಡಾ. ವೈ. ಡಿ ರಾಜಣ್ಣನವರು, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಬೆಟ್ಟೇಗೌಡರು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾ. ಇ.ಸಿ. ನಿಂಗರಾಜೇಗೌಡರು, ಮಹಾಸಭದ ಗೌರವ ಸಲಹೆಗಾರರಾದ ಡಾ.ಚಂದ್ರಶೇಖರ್, ಬಿ.ಸಿ. ಲಿಂಗರಾಜುರವರು, ಕೋಶಾಧ್ಯಕ್ಷರಾದ ಎಂ.ಎನ್ ಚಂದ್ರಶೇಖರ್ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ದೇವಿ ರವರು ನಿರ್ದೇಶಕರುಗಳಾದ ಶ್ರೀ ರವಿಕುಮಾರ್ ಶ್ರೀ ನಾಗೇಂದ್ರ ಶ್ರೀಮತಿ ಜ್ಯೋತಿ, ಶ್ರೀಮತಿ ಶಾರದಾ, ಶ್ರೀಮತಿ ಚಂದ್ರಕಲಾ, ಶ್ರೀಮತಿ ಶಶಿಕಲ, ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾದ ಪಡುವಾರಹಳ್ಳಿ ರಾಮಕೃಷ್ಣ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *