ನಂದಿನಿ ಮೈಸೂರು
ಮೈಸೂರು, ಡಿ.೧೫- ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಕೂಹೂ… ಕೂಹೂ… ಕರ್ನಾಟಕ ವತಿಯಿಂದ ಆಯೋಜಿಸಿದ್ದ ಕೂಹೂ.. ಕೂಹೂ… ಮೈಸೂರು ಕೋಗಿಲೆ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಿದರು. ಯೋಗನರಸಿಂಹಸ್ವಾಮಿ ದೇವಸ್ತಾನದ ಮುಖ್ಯಸ್ಥ ಶ್ರೀನಿವಾಸ್, ಹಾಸ್ಯನಟ ಮಿಮಿಕ್ರಿ ದಯಾನಂದ್, ಖ್ಯಾತ ಗಾಯಕಿ ಶಮಿತಾ ಮಲ್ನಾಡ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಬಿಜೆಪಿ ಮಹಿಳಾ ಮುಖಂಡರಾದ ಹೇಮಾ ನಂದೀಶ್, ಕಾಂಗ್ರೆಸ್ ಮುಖಂಡ ಎಸ್.ಆರ್.ರವಿಕುಮಾರ್, ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟಕಿ ವಿಜಯಗೌಡ, ಸಮಾಜ ಸೇವಕರಾದ ಸಿ.ಜೆ.ಪಾಲಾಕ್ಷ ಗೌಡ, ರವಿ ರಾಜಕೀಯ, ಸಿ.ಎಸ್.ರಘು, ವಸಂತ ಮುನೀಶ್, ಕೆ.ಪಿ.ನಾಗಣ್ಣ, ದೀಪಕ್ ಗೌಡ, ನಿರೂಪಕಿ ದಿವ್ಯಾ ಆಲೂರು ಮತ್ತಿತರರಿದ್ದರು.