ಮೈಸೂರು:23 ಮೇ 2022
ನಂದಿನಿ ಮೈಸೂರು
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದಿಂದ ಕೃಷಿರತ್ನ 2022 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್ ರವರು ಕೃಷಿರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಅಂಶಿ ಪ್ರಸನ್ನ ಕುಮಾರ್ ಮಾತನಾಡಿ ಇತ್ತೀಚಿಗೆ ರೈತರು ನೈಸರ್ಗಿಕ ಬೆಳೆ ಬೆಳೆಯದೇ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾನೆ.ಹೊಟ್ಟೆಪಡಿಗಾಗಿ ಹೆಚ್ಚು ಹಣಗಳಿಸಲು ಭೂಮಿಯನ್ನ ದೌರ್ಜನ್ಯ ಮಾಡುತ್ತಿದ್ದಾರೆ.ಭೂಮಿ ಉಳಿವಿಗಾಗಿ ಶ್ರಮಿಸಬೇಕು. ರೈತ ಏಕಬೆಳೆ ಬೆಳೆಯುತ್ತಿದ್ದಾನೆ.ಬೆಲೆ ಕುಸಿಯುತ್ತಿದೆ.ಬಹು ಬೆಳೆ ಬೇಸಾಯ ರೈತ ಕೈ ಹಿಡಿಯಲಿದೆ.ರೈತರು ಏಕ ಬೆಳೆ ಪದ್ದತಿ ಬಿಟ್ಟು ಬಹುಬೆಳೆ ಪದ್ದತಿ ಅನುಸರಿಸಿ ಎಂದು ರೈತರಿಗೆ ಮನವಿ ಮಾಡಿದರು. ಚಂದನ್ ಗೌಡರವರು ಕೃಷಿ ಮತ್ತು ರೈತ ಕಲ್ಯಾಣಕ್ಕಾಗಿ
ಮಣ್ಣು ಸಂರಕ್ಷಣೆ ಬಗ್ಗೆ ಅಭಿಯಾನ ಕೈಗೊಂಡಿದ್ದಾರೆ.ಅವರ ಅಭಿಯಾನಕ್ಕೆ ಅಭಿನಂಧಿಸುತ್ತೇನೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ಮಾತನಾಡಿ ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣು ಸತ್ತರೆ ಎಲ್ಲಿಗೆ ಎಂದು ಪ್ರಶ್ನಿಸುತ್ತೇನೆ.ಮಣ್ಣನ್ನ ರಕ್ಷಿಸುವ ಕೆಲಸ ನಮ್ಮ ಕೈಯಲ್ಲಿದೆ.ಮಣ್ಣು ರಕ್ಷಣೆ ಆಗದಿದ್ದರೇ ಕೋರೋನಾ ಅಂತಹ ಹಲವಾರೂ ಖಾಯಿಲೆಯಿಂದ ಜನ ಸಾಯೋದಿಲ್ಲ.ಊಟ ಇಲ್ಲದೇ ಸಾಯೋ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಆದ್ದರಿಂದ ಮಣ್ಣನ್ನ ಸಂರಕ್ಷಿಸಬೇಕೆಂದು ಕೇಂದ್ರ, ರಾಜ್ಯ ಸರ್ಕಾರ, ರಾಜಕೀಯ ನಾಯಕರು, ಅನ್ನದಾತರಿಗೆ ಮನವಿ ಸಲ್ಲಿಸುತ್ತೇನೆ.700 ಮೆಟ್ರಿಕ್ ಟನ್ ನಾಶ ಆಗುತ್ತಿದೆ. ಒಂದು ಹಿಡಿ ಮಣ್ಣನ್ನು ಸೃಷ್ಟಿಸಲು ವರ್ಷನುಗಟ್ಟಲೆ ಬೇಕಿದೆ. ಅಂತಹ ಮಣ್ಣನ್ನು ನಶಿಸಲು ನಿಮಿಷ ಸಾಕು. ಹೀಗಾಗಿ ಈ ಮಣ್ಣಿನ ಮೌಲ್ಯವನ್ನು ನಾವೆಲ್ಲರೂ ಅರಿತು ಉಳಿಸಿ ಕೊಳ್ಳಬೇಕಿದೆ. ವರದಿಯೊಂದರ ಪ್ರಕಾರ ಮುಂದಿನ 80 ರಿಂದ 100 ಕೂಯಿಲಷ್ಟೇ ಸಾಧ್ಯ ಎಂಬ ಆಗತಾಕಾರಿ ಅಂಶ ತಿಳಿಸಿದ್ದು, ಬಹುಶಃ ಅದರ ಪ್ರತಿಫಲವೇ ಈಗ ನಾನಾ ರೋಗಗಳು ಸಮಾಜವನ್ನು ಬಾದಿಸುತ್ತಿವೆ. ಹಿಂದೆ ರೋಗ ನಿವಾರಣೆಗೆ ಒಂದು ಕಿತ್ತಳೆ ತಿಂದಿದ್ದರೆ ವಾಸಿ ಯಾಗುತ್ತಿದ್ದ ರೋಗ ಇಂದು 12 ತಿಂದರೂ ವಾಸಿಯಾಗುತ್ತಿಲ್ಲ. ಹೀಗೆ ಆಹಾರವು ಕಲುಷಿತ ಆಗಿತ್ತಿದ್ದು, ಮುಂದೊಂದು ದಿನ ಆಹಾರಕ್ಕಾಗಿಯೇ ಬರ ಬರಬಹುದಾದ ದಿನದತ್ತ ನಾವು ಸಾಗುತ್ತಿರುವ ಅಂಶವನ್ನು ಅರಿತು ಮಣ್ಣಿನ ಮಹತ್ವವನ್ನು ಪ್ರತಿಯೊಬ್ಬರು ಅರಿತು ಮಣ್ಣಿನ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮುಂದಿನ ಪ್ರಣಾಳಿಕೆಯಲ್ಲಿ ಮಣ್ಣಿನ ಫಲವತತ್ತೆ ಉಳಿಸುವ ಅಂಶ ಜಾರಿಗೊಳಿಸುವ ಯೋಜನೆ ಜಾರಿಗೊಳಿಸಬೇಕಿದೆ. ಸರ್ಕಾರದಿಂದ ಮಾತ್ರವೇ ಇದು ಅಸಾಧ್ಯ ಹೀಗಾಗಿ ಅನ್ನದಾತರು ಸಹ ಈ ಮಣ್ಣಿನ ಮೌಲ್ಯ ಉಳಿಸಬೇಕಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದ ಪ್ರತಿಯೊಬ್ಬರ ರೈತರ ಮನೆ ಬಾಗಿಲಿಗೂ ರೈ ಸಂಜೀವಿನಿ ಮಣ್ಣನ್ನು ಉಳಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು.
– ಚಂದನ್ ಗೌಡ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ
ಕಾರ್ಯಕ್ರಮದಲ್ಲಿ ದೇಗೂರ್ ಅಶೋಕ್, ಸ್ವಾಮಿಗೌಡ,ಕಂದಸ್ವಾಮಿ,ಮೂರ್ತಿ,ಹರೀಶ್ ಗೌಡ ಸೇರಿದಂತೆ ಇತರರು ಭಾಗಿಯಾಗಿದ್ದರು.