ಕೃಷಿ ಲಕ್ಷ್ಮಿ ಮಹಿಳಾ ಸಾಧಕಿ ಪ್ರಶಸ್ತಿ‌ ಪ್ರದಾನ

ನಂದಿನಿ ಮೈಸೂರು

ಮೈಸೂರು: ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ವತಿಯಿಂದ ‘ಕೃಷಿ ಲಕ್ಷ್ಮಿ’ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನಿಸಿ,ಗೌರವಿಸಲಾಯಿತು.
ಇಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಕೆಂಪಮ್ಮ ಜವರೇಗೌಡ (ಎಚ್. ಡಿ. ಕೋಟೆ), ಸುಮಾ ಬಿ,ಪಿ ನಾಗರಾಜ್ (ಕೆ ಬೆಳ್ತೂರು ಎಚ್. ಡಿ.ಕೋಟೆ ), ಕಮಲಮ್ಮ ಪುರುಷೋತ್ತಮ (ಕೋಳಗಾಲ ಎಚ್. ಡಿ. ಕೋಟೆ ), ಸುಧಾ ಜವರ ನಾಯಕ (ಯಡಿಯಾಲ), ಕಲ್ಪನಾ ನಾಗನಹಳ್ಳಿ (ಹುಣಸೂರು), ಚಿತ್ರ ಜಯಪ್ರಕಾಶ್ (ಹುಂಡಿಮಾಳ ಹುಣಸೂರು), ಅಖಿಲ ಪಾಟೀಲ್ ಹೆಚ್.ವಿ. (ನಂಜನಗೂಡು), ಜೈ ಮಾಲ ಬೀರೇಗೌಡ (ನಂಜನಗೂಡು), ಮತ್ತು ಚೈತ್ರ ರಾಜ್ ರಾಜೂರು (ಎಚ್. ಡಿ ಕೋಟೆ)ಇವರುಗಳಿಗೆ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಕೃಷಿ ಲಕ್ಷ್ಮಿ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಚಂದನ್ ಗೌಡ ಅವರು ಮಾತನಾಡಿ,ಸಾಂಪ್ರದಾಯಕ ಹಾಗೂ ಸಾವಯವ ಕೃಷಿ ಮಹತ್ವವನ್ನು ತಿಳಿಸಿಕೊಟ್ಟರಲ್ಲದೇ, ಉತ್ಕೃಷ್ಟ ಮತ್ತು ಉತ್ತಮವಾದಂತಹ ಕೇರನ್ ಸಂಸ್ಥೆಯ ಬಯೋ‌ ಉತ್ಪನ್ನಗಳನ್ನು ಬಿಡುಗಡೆ ಮಾಡಿ,ಜೈವಿಕ ವ್ಯವಸಾಯದತ್ತ ಕೃಷಿಕರು ಆದ್ಯತೆ ನೀಡಬೇಕೆಂದು ಮನವಿ‌ ಮಾಡಿದರು.

ಇದೇ ವೇಳೆ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣೆ ಮತ್ತು ರಾಜ್ಯ ಪದಾಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ‌ ಕೂಡ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರುಗಳು, ಉಪಾಧ್ಯಕ್ಷರು ಹಾಗೂ ಹೋಬಳಿ ಗ್ರಾಮದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *