ನಂದಿನಿ ಮೈಸೂರು
ಕೃಷ್ಣಧಾಮದಲ್ಲಿ ಮಧ್ವನವಮಿ: ವಿಶೇಷ ಪೂಜೆ, ಶೋಭಾಯಾತ್ರೆ ಸಡಗರ
ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಮತ್ತು ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಮಧ್ವನವಮಿ ಸಂಭ್ರಮ ಪ್ರಯುಕ್ತ ಸೋಮವಾರ ಬೃಂದಾವನಕ್ಕೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಭಜನಾ ಕಾರ್ಯಕ್ರಮ, ಪವಮಾನ ಹೋಮ,
ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ
ವಾಯುಸ್ತುತಿ ಪುನಸ್ಚರಣೆ
ಪಟಿಸಿದರು
ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು,ಸುಮಧ್ವವಿಜಯ ಪಾರಾಯಣ, ವಾಯುಸ್ತುತಿ ಪುನಃಶ್ಚರಣ ನಡೆಯಿತು. ಬಳಿಕ ಪವಮಾನಹೋಮ, ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ನಡೆಯಿತು
ಸಮಿತಿಯ ಕಾರ್ಯದರ್ಶಿ ಶ್ರೀವತ್ಸ ದಂಪತಿ ಹೋಮದ ಕಾರ್ಯ ನೆರವೇರಿಸಿದರು. ಶ್ರೀಕಾಂತ್ ಆಚಾರ್ಯ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಪವಮಾನಹೋಮ ಪೂಜೆ ನೆರವೇರಿಸಿದರು.
ಸಂಜೆ ಸುಮಧ್ವವಿಜಯ ಪ್ರವಚನ, ಮಧ್ವಾಚಾರ್ಯರ ಸಿದ್ಧಾಂತಗಳ ಕುರಿತು
ಉಡುಪಿಯ ಡಾಕ್ಟರ್ ಬಿ ಗೋಪಾಲಾಚಾರ್
ವಿಶೇಷ ಉಪನ್ಯಾಸ ನೀಡಿದರು.ವಿವಿಧ ಮಹಿಳಾ ಭಜನಾ ಮಂಡಳಿಯಿಂದ ದಾಸವಾಣಿ ಹಾಗೂ ಮಧ್ವಂತರ್ಗತ ವೇದವ್ಯಾಸ ಸೇರಿದಂತೆ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದರು,
ಸರಸ್ವತಿಪುರಂ
ಕೃಷ್ಣದಾಮದಿಂದ
ರಾಜಭೀದಿಗಳಲ್ಲಿ
ಮಧ್ವಾಚಾರ್ಯರ ಭವ್ಯ ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು
ನಂತರ
ಮಂಗಳಾರತಿ ಹಾಗೂ ಪ್ರಸಾದ ಮುಂತಾದ ಕಾರ್ಯಕ್ರಮಗಳು ಜರುಗಿದವುಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ತಂತ್ರಿ, ಕಾರ್ಯದರ್ಶಿ ಶ್ರೀವತ್ಸ, ಶ್ರೀ ಕೃಷ್ಣ
ಟ್ರಸ್ಟ್ ನ ಉಪಾಧ್ಯಕ್ಷರಾದ ಪುಟ್ಟಣ್ಣ ಭಟ್, ಸಿ ಜೆ ಮೋಹನ್, ಕಾರ್ಯದರ್ಶಿ ಪದ್ಮನಾಭ ಭಟ್, ಕೃಷ್ಣ ದಾಸ ಪುರಾಣಿ, ಜಗದೀಶ್ ಹೆಬ್ಬಾರ್, ರಘುವೀರ್ ಪುರಾಣಿ, ಕೃಷ್ಣ ತಂತ್ರಿ, ಪಿ ವಿ ನಾಗೇಶ್, ಶೇಖರ್, ಹಾಗೂ ಇನ್ನಿತರ ಸದಸ್ಯರು ಹಾಗೂ ಭಕ್ತಾದಿಗಳು ಮತ್ತು ಭಜನಾ ಮಂಡಳಿಯ ಸದಸ್ಯರುಗಳು ಹಾಜರಿದ್ದರು.