ಕೀಳನಪುರ ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮ

ನಂದಿನಿ ಮೈಸೂರು

ಮೈಸೂರು ತಾಲೂಕು ಕೀಳನನಪುರ ಕ್ಲಸ್ಟರ್ ಮಟ್ಟದ*ಕಲಿಕಾ ಹಬ್ಬ*ಕಾರ್ಯಕ್ರಮ ಸಂಭ್ರಮ ಸಡಗರದಿಂದ ಕೂಡಿತ್ತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಮೆರವಣಿಗೆಯ ಮೂಲಕ ಮಂಗಳ ವಾದ್ಯ,ಮಕ್ಕಳ ಕುಂಭ ಹಾಗೂ ವೀರಗಾಸೆ ಎಲ್ಲರ ಕಣ್ಮನ ಸೆಳೆದಿತ್ತು.

ಮೈಸೂರು ಜಿಲ್ಲಾ ಉಪ ನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್ ರವರು ಕಾರ್ಯಕ್ರಮ ಉದ್ಘಾಟಿಸಿ ಕಲಿಕಾ ಹಬ್ಬದ ಮಹತ್ವವನ್ನ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಹಾದೇವಪ್ಪ ರವರು, ಎಪಿಸಿ ಸುರೇಶ ರವರು ಮೈಸೂರು ಜಿಲ್ಲಾ ಸರ್ಕಾರಿ ನೌಕರ ಸಂಘದ ಹಿರಿಯ ಉಪಾಧ್ಯಕ್ಷರಾದ ,ಮಾಲಂಗಿ ಸುರೇಶ್ ರವರು .ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮಹಾದೇವ ರವರು, CRP ಶ್ರೀಮತಿ ಶಿಲ್ಪ ರವರು, SDMC ಅಧ್ಯಕ್ಷರಾದ ಮಲ್ಲೂ ರವರು, ನಾಗರಾಜ್ ರವರು, biert ಸಿದ್ದಲಿಂಗಯ್ಯ ರವರು ಎಸ್ ಡಿ ಎಂ ಸಿ ,ಸದಸ್ಯರುಗಳು 11 ಶಾಲೆಗಳ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *