ನಂದಿನಿ ಮೈಸೂರು
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಶ್ರೀವತ್ಸ ರವರು ಇಂದು ಜೆಪಿ ನಗರದಿಂದ ತಮ್ಮ ಮತ ಪ್ರಚಾರ ಯಾತ್ರೆ ಆರಂಭಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರು ಬಿಜೆಪಿ ನಾಯಕರಾದ ಪ್ರೊಫೆಸರ್ ಮಲ್ಲಿಕಾರ್ಜುನಪ್ಪನವರ ಮನೆಗೆ ಭೇಟಿ ನೀಡಿ ಅವರ ಜೊತೆ ಸುಧೀರ್ಘವಾಗಿ ಚರ್ಚಿಸಿದರು. ನಂತರ ಜೆಪಿ ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ವಾಯು ವಿಹಾರಿಗಳನ್ನು ಮತ್ತು ಜೆಪಿ ನಗರದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕೃಷ್ಣ ಕ್ಷೇತ್ರದ ಮಂಡಲ ಅಧ್ಯಕ್ಷ ಒಡಿವೇಲು ಪ್ರಧಾನ ಕಾರ್ಯದರ್ಶಿ ಕೇಬಲ್ ನಾಗೇಂದ್ರ, ದೇವರಾಜ ಗೌಡ, ಜಗದೀಶ್ ಮತ್ತು ಇತರರು ಉಪಸ್ಥಿತರಿದ್ದರು.