ಮಕ್ಕಳ ಚಿತ್ರ ಕಿರುದನಿ ಪ್ರೀಮಿಯರ್ ಶೋ

ನಂದಿನಿ ಮೈಸೂರು

ಮೈಸೂರು, ಜ.೨೧- ಮಕ್ಕಳ ಪೋಷಣೆ, ಅವರ ಕಲಿಕೆ, ತಾಯಿ-ತಂದೆ ಜವಾಬ್ದಾರಿ ಜೊತೆಗೆ ಆಟ-ಪಾಠಗಳಿಂದ ಕೂಡಿರುವ ಮಕ್ಕಳ ಚಿತ್ರ ಕಿರುದನಿ ಪ್ರೀಮಿಯರ್ ಶೋ ಭಾನುವಾರ ಪ್ರದರ್ಶನಗೊಂಡಿತು.

ಮೈಸೂರಿನ ವಿಜಯನಗರ ೩ನೇ ಹಂತದಲ್ಲಿರುವ ಕೃಲ್ಪ ಕ್ಷೇತ್ರ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಮಕ್ಕಳು ಹಾಗೂ ಪೋಷಕರ ನಡುವೆ ಕಿರುದನಿ ಚಿತ್ರದ ಪ್ರೀಮಿಯರ್ ಶೋ ಎಲ್ಲರ ಮನಗೆದ್ದಿತು. ಎಸ್‌ಎಲ್ ಪ್ರೊಡಕ್ಷನ್ ಬ್ಯಾನರಡಿ ದಾಸ್ ಮೋಹನ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಚಿತ್ರದಲ್ಲಿ ಮಕ್ಕಳ ಅಪಹರಣ ಕುರಿತು ಬೆಳಕು ಚೆಲ್ಲಲಾಗಿದೆ.
ಮಕ್ಕಳ ತುಂಟಾಕ್ಕೆ ಅನುಗುಣವಾಗಿ ವೆದಾಂತ್, ಅತಿಶಯ್ ಜೈನ್ ಸಂಗೀತ ಸಂಯೋಜನೆ ಮಾಡಿದ್ದು, ರಕ್ಷಿತ್ ಮಲ್ಲಪ್ಪ, ರಿಜೋಯಿಸ್ ಸಂಕಲನ ಅಚ್ಚುಕಟ್ಟಾಗಿದೆ. ಕನ್ನಡ, ಸಮಾಜ ವಿಜ್ಞಾನ, ವಿಜ್ಞಾನ, ಕ್ರೀಡೆ ಮತ್ತಿತರ ವಿಷಯಗಳ ಕುರಿತು ಸಹ ಸಿನಿಮಾದಲ್ಲಿ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.

ಸಂಪೂರ್ಣ ಮಕ್ಕಳ ಚಿತ್ರ: ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ದೇಶಕ ದಾಸ್ ಮೋಹನ್, ಇದೊಂದು ಸಂಪೂರ್ಣ ಮಕ್ಕಳ ಚಿತ್ರವಾಗಿದ್ದು, ನೂರಾರು ಮಕ್ಕಳ ತೆರೆ ಹಂಚಿಕೊಂಡಿದ್ದಾರೆ. ಶಾಲೆ ಆವರಣ ಸೇರಿದಂತೆ ರಾಜ್ಯದ ವಿವಿಧೆಡೆ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.UA ಸರ್ಟಿಫಿಕೇಟ್ ಕಿರುದನಿ ಚಿತ್ರಕ್ಕೆ ಬಂದಿದೆ. ಸದ್ಯದಲ್ಲಿಯೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಸ್ವಾಮಿ, ಸಂಶೋಧಕ ಶಂಕರ್,Anand rathod,
Shain sha,Ramaswamy,ShankarSyed saleem,DassMohan,Ravi kelaganalli
Ashok Bhajentri,Hameed,Rock taaru,
Niyathi,Tanava,Yesash,Shakil
Salman ಮತ್ತಿತರರಿದ್ದರು.

ಮತ್ತಿತರರಿದ್ದರು.

Leave a Reply

Your email address will not be published. Required fields are marked *