ಕಿನಾರಾ ಸಂಸ್ಥೆಯಿಂದ ಕರ್ನಾಟಕದಲ್ಲಿ 575 ಕೋಟಿಗೂ ಹೆಚ್ಚು ವ್ಯಾಪಾರ ಸಾಲ ವಿತರಣೆ ಯೋಜನೆ

ನಂದಿನಿ ಮೈಸೂರು

ಕಿನಾರಾ ಸಂಸ್ಥೆಯಿಂದ ಕರ್ನಾಟಕದಲ್ಲಿ 575 ಕೋಟಿಗೂ ಹೆಚ್ಚು ವ್ಯಾಪಾರ ಸಾಲ ವಿತರಣೆ ಯೋಜನ

ಮೈ ಕಿನಾರಾ ಕನ್ನಡ ಆ್ಯಪ್ ಮೂಲಕ ಸಾಲ ವಿತರಣೆ ಪ್ರಕ್ರಿಯೆ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಿನಾರಾ ಕ್ಯಾಪಿಟಲ್

ಮೈಸೂರು, ಸೆಪ್ಟೆಂಬರ್ 13,2023: ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಒದಗಿಸುವ ಕಿನರಾ ಕ್ಯಾಪಿಟಲ್ ಕರ್ನಾಟಕದಲ್ಲಿ ಮತ್ತಷ್ಟು ಉದ್ಯಮ ಸಾಲ ಒದಗಿಸಲು ಮುಂದಾಗಿದೆ. 2024 ಹಣಕಾಸು ವರ್ಷದಲ್ಲಿ 575 ಕೋಟಿಗೂ ಹೆಚ್ಚು ವ್ಯಾಪಾರ ಸಾಲ ಒದಗಿಸುವುದಾಗಿ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ.

ಯೋಜನೆ ಕುರಿತು ವಿವಿರಿಸಿದ ಕಿನಾರಾ ಕ್ಯಾಪಿಟಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(COO) ತಿರುನಾವುಕ್ಕರಸು ಆರ್, ಕರ್ನಾಟಕ ವೈವಿಧ್ಯಮಯ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಹೊಂದಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶ. ಕಿನಾರಾ ಕ್ಯಾಪಿಟಲ್ ಕರ್ನಾಟಕದಲ್ಲಿ ಪ್ರಧಾನ ಕಛೇರಿ ಹೊಂದಿರುವುದಕ್ಕೆ ಹೆಮ್ಮೆ ಪಡುತ್ತೇವೆ ಮತ್ತು ನಾವು ಇಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಣ್ಣ ವ್ಯಾಪಾರ ಉದ್ಯಮಗಳಿಗೆ ಬೆಂಬಲ ನೀಡಿದ್ದೇವೆ. 2024 ಹಣಕಾಸು ವರ್ಷದಲ್ಲಿ 575 ಕೂಟಿ ರೂ. ಗೂ ಹೆಚ್ಚು ಹಣ ವಿತರಿಸಲು ಉದ್ದೇಶಿಸಿರುವುದು ಇನ್ನಷ್ಟು ಸಣ್ಣ ಉದ್ಯಮಗಳ ಬೆಳವಣಿಗೆಗೆ ನೆರವಾಗಲಿದೆ ಮತ್ತು ಸ್ಥಳೀಯವಾಗಿ 6000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಸಣ್ಣ, ಕಿರು ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರು ಕನ್ನಡದಲ್ಲಿ ಲಭ್ಯವಿರುವ ಹಾಗೂ ಬಳಸಲು ಸುಲಭವಾಗಿರುವ ಮೈ ಕಿನಾರಾ ಅಪ್ಲಿಕೇಶನ್ (myKinara App)ಮೂಲಕ ತಮ್ಮ ಮೊಬೈಲ್ ನಲ್ಲೇ ಈ ಪ್ರಕ್ರಿಯೆ ನಡೆಸಬಹುದು. 2023 ಹಣಕಾಸು ವರ್ಷದಲ್ಲಿ ಕಿನಾರಾ ಸಂಸ್ಥೆ 341 ಕೋಟಿ ರೂ. ಉದ್ಯಮ ಸಾಲ ವಿತರಿಸಿದೆ. ಇದು 2022 ರಲ್ಲಿ ವಿತರಿಸಿದ ಮೊತ್ತಕ್ಕಿಂತ ಶೇ.141 ಹೆಚ್ಚಾಗಿದೆ.

ಕಿನಾರಾ ಕ್ಯಾಪಿಟಲ್ ಇತ್ತೀಚೆಗೆ ಹಾವೇರಿ, ಹುಮನಾಬಾದ್ ಮತ್ತು ರಾಮನಗರದಲ್ಲಿ 3 ಹೊಸ ಶಾಖೆಗಳನ್ನು ತೆರೆದಿದೆ. 28 ಶಾಖೆಗಳು ಮತ್ತು 658 ಪಿನ್ಕೋಡ್ ಗಳಿಗೆ ತನ್ನ ಭೌಗೋಳಿಕ ಅಸ್ತಿತ್ವವನ್ನು ವಿವರಿಸಿದೆ. ಅಲ್ಲದೆ, ಸಂಸ್ಥೆ ಕರ್ನಾಟಕದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 930 ಕ್ಕೆ ಏರಿಸಲು ಯೋಜಿಸಿದೆ. 300 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಲು ಸಿದ್ಧವಾಗಿದೆ.

ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಕಿನಾರಾ ಕ್ಯಾಪಿಟಲ್ ಸಣ್ಣ ಕೈಗಾರಿಕೆಗಳಿಗೆ 1 ಲಕ್ಷದಿಂದ 30 ಲಕ್ಷದವರೆಗೆ ಮೇಲಾಧಾರ ಮುಕ್ತ ಸಾಲ ವಿತರಿಸುತ್ತದೆ. ದೀರ್ಘಾವಧಿ ವರ್ಕಿಂಗ್ ಕ್ಯಾಪಿಟಲ್, ಅಲ್ಪಾವಧಿ ವರ್ಕಿಂಗ್ ಕ್ಯಾಪಿಟಲ್, ಯಂತ್ರೋಪಕರಣಗಳ ಖರೀದಿ, ಬಿಲ್ ರಿಯಾಯಿತಿಗಳನ್ನು ಒದಗಿಸುತ್ತದೆ. 300 ಉಪ ವಲಯಗಳಿಗೆ ಹರ್ ವಿಕಾಸ್ ಸಾಲಗಳನ್ನು ಒದಗಿಸುತ್ತಿದೆ.

ಇಲ್ಲಿಯವರೆಗೆ ಕಿನಾರಾ ಕರ್ನಾಟಕದಲ್ಲಿ 20,717 ಉದ್ಯಮಗಳಿಗೆ 1,089 ಕೋಟಿಗಿಂತ ಹೆಚ್ಚು ಸಾಲ ವಿತರಿಸಿದೆ. ಸ್ಥಳೀಯ ಆರ್ಥಿಕತೆಯಲ್ಲಿ 21,437 ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಹಾಗೂ 79 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಆದಾಯಕ್ಕೆ ಕಾರಣವಾಗಿದೆ. ಆಹಾರ ಉತ್ಪನ್ನಗಳು, ನಿರ್ಮಾಣ ಸಾಮಗ್ರಿಗಳು, ಯಂತ್ರ ಘಟಕಗಳು, ಜವಳಿ, ಫ್ಯಾಬ್ರಿಕೇಶನ್, ಆಟೋ ಘಟಕಗಳು, ಆಟೋ ಮೊಬೈಲ್ ಗಳು ಇತ್ಯಾದಿಗಳು ರಾಜ್ಯದಲ್ಲಿ ಕಿನಾರಾ ಕ್ಯಾಪಿಟಲ್ ನ ಕೆಲವು ಪ್ರಮುಖ ಉಪವಲಯಗಳಾಗಿವೆ.

ಕಿನಾರಾ ಸಂಸ್ಥೆ ತನ್ನ ವಿಶೇಷ ಕಾರ್ಯಕ್ರಮ ಹರ್ ವಿಕಾಸ್ ಮೂಲಕ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುತ್ತಿದೆ. ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವಾಗ ರಿಯಾಯಿತಿ ನೀಡುತ್ತದೆ. ಕರ್ನಾಟಕದಲ್ಲಿ 956ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ಈ ವರೆಗೆ 87 ಕೋಟಿ ರೂ ಸಾಲ ವಿತರಿಸಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಮಾಲೀಕತ್ವದ ಉದ್ಯಮಗಳಿಗೆ ಹೆಚ್ಚಿನ ಸಾಲ ವಿತರಿಸಲು ಯೋಜನೆಗಳನ್ನು ರೂಪಿಸಿದೆ.

 

ಕಿನಾರಾ ಸಂಸ್ಥೆ ಕುರಿತು

ಕಿನಾರಾ ಕ್ಯಾಪಿಟಲ್ ವೇಗವಾಗಿ ಬೆಳೆಯುತ್ತಿರುವ ಫಿನ್ ಟೆಕ್ ಕಂಪೆನಿಯಾಗಿದೆ. 2011ರಲ್ಲಿ ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದೆ. ಭಾರತದಲ್ಲಿ ಸಣ್ಣ ಉದ್ಯಮಗಳಿಗೆ ಮೇಲಾಧಾರ ಮುಕ್ತ ವ್ಯಾಪಾರ ಸಾಲ ನೀಡುವಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಈವರೆಗೆ ದೇಶದಲ್ಲಿ 5000 ಕೋಟಿ ಗೂ ಹೆಚ್ಚು ಉದ್ಯಮ ಸಾಲ, 90,000 ಕ್ಕೂ ಹೆಚ್ಚು ಉದ್ಯಮಗಳಿಗೆ ಕೊಲ್ಯಾಟರಲ್ ಫ್ರೀ ವ್ಯಾಪಾರ ಸಾಲ ಒದಗಿಸುವ ಮೂಲಕಕಿರು, ಸಣ್ಣಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಗೆ ನೆರವಾಗಿದೆ. ತನ್ನ ಮ್ಯಾನೇಜ್ಮೆಂಟ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೇ ಹೊಂದಿರುವ ಕಿನಾರಾ ಆಂತರಿಕವಾಗಿಯೂ ಮಹಿಳಾ ಸಬಲೀಕರಣದತ್ತ ಹೆಜ್ಜೆ ಹಾಕಿದೆ. ಹರ್ವಿಕಾಸ್ ಕಾರ್ಯಕ್ರಮದ ಮೂಲಕ ಮಹಿಳಾ ಉದ್ಯಮಿಗಳಿಗೂ ನೆರವಾಗಿದೆ. ಕಿನಾರಾ ಕ್ಯಾಪಿಟಲ್ ವ್ಯಾಪಾರ ಸಾಲ ವಿತರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಎನ್ ಬಿಎಫ್ ಸಿ (NBFC) ಅರ್ಹತೆ ಪಡೆದಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (BSE)ನಿಂದಲೂ ಗುರುತಿಸಲ್ಪಟ್ಟಿದೆ.

ಕಿನಾರಾ ಕ್ಯಾಪಿಟಲ್ 133 ಶಾಖೆಗಳನ್ನು ಹೊಂದಿದ್ದು, 100ಕ್ಕೂ ಹೆಚ್ಚು ನಗರಗಳಲ್ಲಿ 1600 ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ kinaracapital.com ಗೆ ಭೇಟಿ ನೀಡಬಹುದು. @KinaraCapital. ಟ್ವಿಟ್ಟರ್ ಖಾತೆಯನ್ನೂ ಪರಿಶೀಲಿಸಬಹುದು.

Leave a Reply

Your email address will not be published. Required fields are marked *