ಮೈಸೂರು:12 ಜುಲೈ 2022
ನಂದಿನಿ ಮೈಸೂರು
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ,
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ದಿಂದ ಕೆ.ಎಚ್.ರಾಮಯ್ಯನವರ
143 ನೇ ಜನ್ಮ ದಿನವನ್ನ ಆಚರಿಸಲಾಯಿತು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ.ಎಚ್.ರಾಮಯ್ಯರವರ ಸಮಾಧಿಗೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಎಚ್.ಕೆ.ರಾಮು ಹಾಗೂ ಗಂಗಾಧರ್ ಗೌಡ ಮಾತನಾಡಿ ಯಮುನಾ ರವರು ಇಂದು ಕೆ.ಎಚ್.ರಾಮಯ್ಯನವರ
143 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಕರ್ನಾಟಕ ಒಕ್ಕಲಿಗರು ಸ್ಥಾಪನೆಗೆ ಅವರೇ ಕಾರಣ.ಕೃಷ್ಣರಾಜ ಒಡೆಯರ್ ರವರ ಆಸ್ಥಾನದಲ್ಲಿ ಉದ್ಯೋಗ ಪಡೆದು ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.ಹಿಂದುಳಿದ, ಅಲ್ಪಸಂಖ್ಯಾತ,ಹಿಂದುಳಿದ,ದಲಿತರ ಶ್ರೇಯೋಭಿವೃದ್ದಿಗೆ ಶ್ರಮಿಸಿದವರು.ಒಕ್ಕಲಿಗರು ಅಂದು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದರು.ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು.ಅವರ ಸೇವೆಯನ್ನ ಸ್ಮರಿಸುತ್ತಾ ಅವರ ಹಣತೆಯಂತೆ ನಾವೆಲ್ಲ ನಡೆಯಬೇಕು.ಇಲ್ಲಿರುವ 3ವರೆ ಎಕರೆ ಜಾಗದಲ್ಲಿ ಅಭಿವೃದ್ಧಿ ಮಾಡೋದಕ್ಕೆ ನಿರ್ಧರಿಸಿದ್ದೇವೆ.ಈಗಾಗಲೇ ನೀಲಿನಕ್ಷೆ ತಯಾರಾಗಿದೆ ಎಂದರು.
ಪಾಲಿಕೆ ಸದಸ್ಯ ಶ್ರೀಧರ್,ಯಮುನಾ ಸೇರಿದಂತೆ ಒಕ್ಕಲಿಗರು ಭಾಗಿಯಾಗಿದ್ದರು.