ಕೆಂಗಲ್ ಹನುಮಂತಯ್ಯನವರ 115 ನೇ ಜಯಂತಿ

ನಂದಿನಿ ಮೈಸೂರು

ಕರ್ನಾಟಕ ಸೇನಾ ಪಡೆಯ ವತಿಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯನವರ 115 ನೇ ಜಯಂತಿ ಆಚರಿಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಶಿವಕುಮಾರ ರವರು ಕೆಂಗಲ್ ಹನುಮಂತಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಾಗೂ ನೆರೆದಿದ್ದ ಜನಸ್ತೋಮಕ್ಕೆ ಸಿಹಿ ವಿತರಣೆ ಮಾಡಿ ಮಾತನಾಡಿದ ಅವರು ಕೆಂಗಲ್ ಹನುಮಂತಯ್ಯ ರವರು ನಾಡು ಕಂಡ ಶ್ರೇಷ್ಠ ಅಪರೂಪದ ರಾಜಕಾರಣಿ, ಮುತ್ಸದ್ದಿ ಕರ್ನಾಟಕದ ಏಕೀಕರಣವು ಅವರ ಮಹಾನ್ ಸಾಧನೆ’. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ವಿಧಾನ ಸೌಧ ನಿರ್ಮಾಣ ಮಾಡಿ ” ಸರ್ಕಾರಿ ಕೆಲಸ ದೇವರ ಕೆಲಸ ” ಎಂದು ನಾಮಫಲಕ ಹಾಕಿದ್ದರು. ಎಲ್ಲಾ ರಾಜಕಾರಣಿಗಳೂ, ನಾವೆಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿ ಕೊಳ್ಳಬೇಕು, ಇಂತಹ ಮಹನೀಯರ ಜಯಂತಿ ಆಚರಣೆ ಶ್ಲಾಘನೀಯ ಎಂದರು.

ನಂತರ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಇದು ಕೆಂಗಲ್ ರವರ 115 ನೇ ಹುಟ್ಟು ಹಬ್ಬ. ಆಗಿನ ಹಳೇ ಮೈಸೂರು ರಾಜ್ಯ ಒಕ್ಕಲಿಗರ ಪ್ರಾಬಲ್ಯ ಹೊಂದಿತ್ತು. ಏಕೀಕರಣ ಆದರೆ ಒಕ್ಕಲಿಗರ ಪ್ರಾಬಲ್ಯ ಹೋಗುತ್ತದೆ ಎಂದು ಎಲ್ಲಾ ಮುಖಂಡರುಗಳು ಹೇಳಿ ವಿರೋಧ ಮಾಡಿದರೂ, ಇವರು ಅದಾವುದಕ್ಕೂ ಮಣಿಯದೆ ಅಖಂಡ ಕರ್ನಾಟಕ ಆಗಲೇಬೇಕು ಎಂದು ಏಕೀಕರಣ ಬೆಂಬಲಿಸಿ ತಮ್ಮ ಮುಖ್ಯಮಂತ್ರಿ ಪದವಿ ಯನ್ನೇ ಕಳೆದುಕೊಂಡ ಮಹಾನ್ ನಾಯಕ ಹಾಗೂ ನಮ್ಮ ಭಾರತದಲ್ಲೇ ಎಲ್ಲೂ ಇಲ್ಲದಂತ ವಿಶ್ವ ಪ್ರಸಿದ್ಧ ವಿಧಾನ ಸೌಧದ ನಿರ್ಮಾತ ಶ್ರೀ ಕೆಂಗಲ್ ಹನುಮಂತಯ್ಯ ರವರ ಹುಟ್ಟು ಹಬ್ಬವನ್ನು ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಆಚರಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

ನೆರೆದಿದ್ದ ಜನರಿಗೆ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಶ್ರೀ ಸಿಜಿ ಗಂಗಾಧರ್ ರವರು ಸಿಹಿ ವಿತರಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಸುಯೋಗ ಆಸ್ಪತ್ರೆಯ ಸಂಸ್ಥಾಪಕರು ಡಾ. ಎಸ್ ಪಿ ಯೋಗಣ್ಣ, ಹಿರಿಯ ಸಮಾಜ ಸೇವಕ ಡಾ ರಘುರಾಂ ಕೆ ವಾಜಪೇಯಿ, ಸುರೇಶ್ ಗೋಲ್ಡ್, ಡಾ. ಶಾಂತರಾಜೇಅರಸ್, ಸಿ ಹೆಚ್ ಕೃಷ್ಣಯ್ಯ, ಪ್ರಭುಶಂಕರ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್, ಗಿರೀಶ್ ಕುಮಾರ್, ಎಳನೀರು ರಾಮಣ್ಣ, ಪ್ರಭಾಕರ, ಮೊಗಣ್ಣಾಚಾರ್, ಯೋಗೀಶ್ ಉಪ್ಪಾರ, ಪದ್ಮ, ಹನುಮಂತಯ್ಯ, ಗಣೇಶ್ ಪ್ರಸಾದ್ ದಿಲೀಪ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *