ನಂದಿನಿ ಮೈಸೂರು
ಮಾಂಸ ಪ್ರೀಯರಿಗೆ ಬಾಯಲ್ಲಿ ನೀರುಣಿಸುವಂತಹ ಬಗೆ ಬಗೆಯ ರುಚಿ ಶುಚ್ಚಿಯಾದ ಊಟ ಬಡಿಸಿದರೇ ಸಾಕು ತಾನು ಉಂಡು ಮನೆಯವರಿಗೂ ಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಹೌದು ಮೈಸೂರಿನಲ್ಲಿ
ಒಂದು ಸೈಕಲ್ ಸವಾರಿಯೊಂದಿಗೆ ಕಾವೇರಿ ಮೆಸ್ಸ್ ಎಂಬ ಹೆಸರಿನಲ್ಲಿ
ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದ ಸಮಾಜ ಸೇವಕ ಮಂಡ್ಯ ಸಿದ್ದರಾಜು ಗೌಡ್ರು ಅತೀ ಕಡಿಮೆ ಬೆಲೆಗೆ ಚಿಕನ್ ಬಿರಿಯಾನಿ ಹಾಗೂ ಬಗೆ ಬಗೆಯ ಮಾಂಸಹಾರಿ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸಿ ಮೆಚ್ಚುಗೆ ಪಡೆದಿದ್ದಾರೆ.
ಮೈಸೂರು ಸುತ್ತಾ ಮುತ್ತಾ ಈಗಾಗಲೇ 5 ಶಾಖೆಗಳಿದ್ದು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಬಿರಿಯಾನಿ ಪೂರೈಸುತ್ತ ಬಂದಿರುವ ಕಾವೇರಿ ಮೆಸ್ಸ್ ಮೈಸೂರಿನ ಹೃದಯ ಭಾಗದಲ್ಲಿರುವ ಸಬರ್ ಬಸ್ ನಿಲ್ದಾಣ ಎದುರು ತನ್ನ 6ನೇ ಶಾಖೆ ಆರಂಭಿಸಿದೆ.
ನಗರ ಪಾಲಿಕೆ ಸದಸ್ಯರಾದ ಕೆ ವಿ ಶ್ರೀಧರ್, ಚೌಡಪ್ಪ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ, ರವಿ ಶಾಸ್ತ್ರೀ ಮುಂತಾದ ಗಣ್ಯರ ಸಮ್ಮುಖದಲ್ಲಿ ಟೇಪ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ 6ನೇ ಶಾಖೆ ಉದ್ಘಾಟಿಸಿ ಸಿದ್ದರಾಜುರವರಿಗೆ ಹಾಗೂ ಕುಟುಂಬಸ್ಥರಿಗೆ ಶುಭ ಹಾರೈಸಿದರು.
ಪ್ರತಿಯೊಂದು ಶಾಖೆಯಲ್ಲೂ ಪ್ರತಿದಿನ ಒಂದು ಕ್ವಿಂಟಲ್ ಚಿಕನ್ ಬಿರಿಯಾನಿ ಹಾಗೂ ಮುಂತಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ವಯಸ್ಕರು, ಸಾಮಾನ್ಯ ವರ್ಗದವರು, ವಿದ್ಯಾರ್ಥಿಗಳು, ಕುಟುಂಬಸ್ಥರು ಭೇಟಿ ನೀಡಿ ರುಚಿ ಗೆ ಪ್ರೀತಿ ಪಾತ್ರರಾಗಿ 6ನೇ ಶಾಖೆ ಆರಂಭಕ್ಕೆ ಹಾರೈಸಿದ್ದಾರೆ.
ಸಹೋದರ ಕೃಷ್ಣ ನವರು ಅಣ್ಣ ಸಿದ್ದರಾಜು ಗೌಡರಿಗೆ ಬೆಂಬಲವಾಗಿದ್ದು, ಕುಟುಂಬಸ್ಥರು ಸಂಪೂರ್ಣ ವಾ ಗಿ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದು ಹೋಟೆಲ್ ಉದ್ಯಮಕ್ಕೆ ಕಾರಣರಾಗಿದ್ದಾರೆ.
ಕಾವೇರಿ ಮೆಸ್ ಮಾಲೀಕರದ ಸಿದ್ದರಾಜು ಗೌಡ ಸಾರ್ವಜನಿಕರ ಪ್ರೋತ್ಸಾಹಕ್ಕೆ ಅಭಿನಂದನೆ ಸಲ್ಲಿಸಿ ಗ್ರಾಹಕರು ಮತ್ತೆ ಮತ್ತೆ ಕಾವೇರಿ ಮೇನ್ ಗೆ ಭೇಟಿ ನೀಡಿ ಎಂದು ತಿಳಿಸಿದರು.