ಮೈಸೂರು:4 ಮಾರ್ಚ್ 2022
ನಂದಿನಿ ಮೈಸೂರು
ಇದೇ ಮೊದಲ ಬಾರಿಗೆ ನಾಲ್ಕು ವರ್ಷದ ಗಂಡು ಮಗುವಿಗೆ ಮೂತ್ರಪಿಂಡದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಎಂದು ಕಾವೇರಿ ಆಸ್ಪತ್ರೆಯ ಮೂತ್ರರೋಗ ಶಸ್ತ್ರ ಸಲಹಾ ತಜ್ಞರಾದ ಡಾ.ಉಮೇಶ್ ಮಾಹಿತಿ ನೀಡಿದರು.
ಬೆಟ್ಟದಪುರದ ನಾಲ್ಕು ವರ್ಷದ ಗಂಡು ಮಗುವಿಗೆ ಸೊಂಟದ ಎಡಭಾಗದಲ್ಲಿ ಊತದ ತೊಂದರೆಯೊಂದಿಗೆ ಆಸ್ಪತ್ರೆಗೆ ಆಗಮಿಸಿದ್ರು . ವೈದ್ಯಕೀಯ ನಂತರ ಎಡ ಮೂತ್ರಪಿಂಡದಲ್ಲಿ 11 cm ಆಳತೆಯ ದೊಡ್ಡ ಗಾತ್ರದ ಗೆಡ್ಡೆ ಇರುವುದು ಕಂಡುಬಂದಿತ್ತು .ಶಸ್ತ್ರ ಚಿಕಿತ್ಸೆ ನಡೆಸಲಾಯಿತು.
ವೈದ್ಯಕೀಯ ರೋಗಶಾಸ್ತ್ರ ಪರೀಕ್ಷೆಯಲ್ಲಿ ಈ ಮಗುವಿಗೆ ವಿಲ್ಡ್ ಟ್ಯೂಮರ್ ( ರೋಲ್ಲಾಸಿಮಾ ) ಎಂಬ ಗಡ್ಡೆ ಮೂತ್ರಪಿಂಡದಲ್ಲಿ ಇರುವುದು ತಿಳಿದುಬಂದಿತ್ತು . ಈ ರೋಗಿಗೆ ಕಿಮೋಥೆರಪಿ ನೀಡಲಾಗುತ್ತಿದೆ.
ಮೋದರಲ್ಲಿ ನೀಡಲಾಗುತ್ತಿದೆ , ವಿಲ್ಮ್ಸ್ ಟ್ಯೂಮರ್ ಪ್ರಕರಣಗಳು ಏಷ್ಯಾ ದೇಶಗಳಲ್ಲಿನ 10,000 ಮಕ್ಕಳ ಪೈಕಿ 3-1 ಮಕ್ಕಳಲ್ಲಿ ಕಂಡು ಗುತ್ತಿವೆ . ಇದು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ . ಮೈಸೂರಿನಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾದ ಮೊದಲ ಪ್ರಕರಣವಾಗಿದೆ.ಬಿಪಿಎ ಕಾರ್ಡ್ ಇದ್ದಿದ್ದರಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.ನಂತರ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದರು.
ಡಾ.ಗಿರೀಶ್,ಡಾ.ಕೇಶವಮೂರ್ತಿ,ಡಾ.ಅರವಿಂದ್ ಹಾಜರಿದ್ದರು.