ಮೈಸೂರು:14 ಡಿಸೆಂಬರ್ 2021
ನಂದಿನಿ
ಕೃಷಿ ಇಲಾಖೆ ಮೈಸೂರು ತಾಲ್ಲೂಕು ಜಯಪುರ ಹೋಬಳಿ ಟಿ.ಕಾಟೂರು ಗ್ರಾಮದಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಕ್ಷೇತ್ರೋತ್ಸವ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ.ಸದಸ್ಯರು ಹಾಗೂ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದೇವರಾಜ್ ಟಿ ಕಾಟೂರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ಅತಿಯಾದ ಹಾಗೂ ಸತತ ಮಳೆಯಿಮನದಾಗಿ ರಾಗಿ ಮತ್ತು ತರಕಾರಿ ಬೆಳೆಗಳು ನೀರು ಪಾಲಗಿದ್ದಾವೆ.ಇದರಿಂದ ಎಲ್ಲಾ ರೈತರಿಗೂ ಬೆಳೆ ನಷ್ಟದಿಂದ ಆರ್ಥಿಕವಾಗಿ ತೊಂದರೆಯಾಗಿರುವುದರಿಂದ ಸರ್ಕಾರ ತಕ್ಷಣವೇ ನಷ್ಟ ಆದ *ರೈತರನ್ನು ಗುರುತಿಸಲು ಸರ್ವೆ ಮಾಡಿಸಿ ಅವರಿಗೆ ತಕ್ಷಣವೇ ಬೆಳೆ ಪರಿಹಾರವನ್ನು ನೀಡಿ ಆರ್ಥಿಕವಾಗಿ ನಷ್ಟ ಅನುಭವಿಸಿರುವ ರೈತರಿಗೆ ಆಸರೆಯಾಗಿ ಸರ್ಕಾರ ಅವರಿಗೆ ನೈತಿಕವಾಗಿ ಜೊತೆಗೆ ನಿಲ್ಲಬೇಕೆಂದು ಆಗ್ರಹಿಸಿದ್ದಾರೆ.
ರೈತರಿಗೆ ಸರ್ಕಾರ ಕೃಷಿ ಇಲಾಖೆ ಮೂಲಕ ರೈತರು ಬೆಳೆಯುವ ಬೆಳೆಗಳನ್ನು ಗುರುತಿಸಿ ಅವುಗಳಿಗೆ ಸಂಬಂಧಿಸಿದ *ಗುಣಮಟ್ಟದ ಔಷದಿಗಳನ್ನು ಕಡಿಮೆ ದರದಲ್ಲಿ ನೀಡಬೇಕು. ಕಳಪೆ ಔಷದಿಗಳನ್ನು ತಡೆಯಬಹುದಾಗಿದೆ.
ಜೊತೆ ಸರ್ಕಾರವೇ ಗುಣಮಟ್ಟದ ಔಷದಿಗಳನ್ನು ನೀಡಿದರೆ ರೈತರು ಇನ್ನೂ ಹೆಚ್ಚಿನ ಬೆಳೆಗಳನ್ನು ಬೆಳೆಯುವುದಕ್ಕೆ ಉತ್ತೇಜನ ನೀಡಿದಂಗೆ ಆಗುತ್ತದೆ ಆದರಿಂದ ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಕ್ರಮ ವಹಿಸಬೇಕಾಗುತ್ತದೆ.
ಖಾಸಗಿ *ರೈತ ಸಂಪರ್ಕ ಕೇಂದ್ರದ ಡಿಲರಗಳು ತಪ್ಪು ಮಾಹಿತಿ ಔಷದಿಗಳನ್ನು ರೈತರಿಗೆ ನೀಡಿ ಬೆಳೆಗಳಿಗೆ ಸಂಬಂಧಿಸದ ಔಷದಿಗಳನ್ನು ಅನಾವಶ್ಯಕವಾಗಿ ಹೆಚ್ಚುವರಿಯಾಗಿ ನೀಡಿ ಹಣಗಳಿಸುವ ಮೂಲಕ ರೈತರನ್ನು ಕಿತ್ತು ತಿನ್ನುತ್ತಿದ್ದಾರೆ* ಇದರಿಂದ ಡೀಲರ್ಗಳಿಗೆ ಲಾಭ ಮಾತ್ರ ವಿನಹ ರೈತರಿಗಲ್ಲ ಅನ್ನೊದನ್ನ ಎಲ್ಲಾ ಪ್ರಗತಿ ಪರ ರೈತರು ಅರ್ಥ ಮಾಡಿಕೊಂಡು,ತಾವೇ *ರೈತರು ಸ್ವತಃಹ ಸಾವಯವ ಗೊಬ್ಬರಗಳನ್ನು ಹೈನುಗಾರಿಕೆ ಮಾಡುವ ಮೂಲಕ ತಯಾರಿಸಿಕೊಂಡು ಜಮೀನುಗಳಿಗೆ ಉಪಯೋಗಿಸಿದರೆ,ರಾಸಾಯನಿಕ ಗೊಬ್ಬರಗಳಿಂತ ಹೆಚ್ಚು ಬೆಳೆಗಳನ್ನು ತೆಗೆಯಬಹುದು ಮತ್ತು ಎಲ್ಲಾ ರೀತಿಯ ರೋಗಗಳನ್ನು ನಾಶ ಮಾಡಬಹುದಾದ ಶಕ್ತಿ ಸಾವಯವ ಗೊಬ್ಬರಕ್ಕಿದೆ* ಆದರಿಂದ ರೈತರು ಇದರ ಕಡೆ ಗಮನ ಕೊಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದು ತಿಳಿಸಿದರು.
ಸರ್ಕಾರದಿಂದ ಎಸ್ಸಿಪಿ,ಟಿಎಸ್ಪಿ ಅನುದಾನ ಅಡಿಯಲ್ಲಿ *ಹಲವಾರು ಸವಲತ್ತುಗಳನ್ನು ಎಸ್.ಸಿ ಮತ್ತು ಎಸ್.ಟಿ ಜನಾಂಗ ರೈತರಿಗೆ ಹಾಗೂ ಸಾಮಾನ್ಯ ಕೋಟಾದಲ್ಲಿ ಎಲ್ಲಾ ವರ್ಗದವರಿಗೂ ರಿಯಾಯಿತಿ ದರದಲ್ಲಿ ಸಲಕರಣಿಗಳನ್ನು ಕೃಷಿ ಇಲಾಖೆ ಮುಖಾಂತರ ವಿತರಣೆ ಮಾಡುತ್ತಿದ್ದಾರೆ* ಅದನ್ನು ರೈತರು ಸದುಪಯೋಗ ಪಡಿಸಿಕೊಳ್ಬೇಕೆಂದು ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಸಹಾಯಕ ಕೃಷಿ *ನಿರ್ದೇಶಕರಾದ ಓಂಬಯ್ಯ* ಅವರು ರಾಗಿ ಬೆಳೆ,ಕಾಳುಗಳ ಬೆಳೆ ತರಕಾರಿ ಬೆಳೆಗಳನ್ನು ಬೆಳೆಯುವ ವಿಧಾನ ,ಔಷದಿಗಳನ್ನು ಯಾವ ಯಾವ ಸಂದರ್ಭದಲ್ಲಿ ಉಪಯೋಗಿಬೇಕು ,ಗೊಬ್ಬರ ಯಾವ ಮಟ್ಟದಲ್ಲಿ ಹಾಕಬೇಕು ಎಂದು ರೈತರಿಗೆ ತಿಳಿಸಿಕೊಟ್ಟರು.
ಮತ್ತೊಬ್ಬ ನಿವೃತ್ತ ಕೃಷಿ ಅಧಿಕಾರಿಗಳಾದ ತಮ್ಮೇಗೌಡ ಅವರು ಮಾತನಾಡಿ ಬೆಳೆಗಳನ್ನು ಬೆಳೆಯಲು ಮಣ್ಣುನ ಮಹತ್ವ ಹೇಗಿರಬೇಕು,ಯಾವ ಯಾವ ಕಾಲಘಟ್ಟದಲ್ಲಿ ಯಾವ ರೀತಿಯ ಬೆಳೆಗಳನ್ನು ಬೆಳೆಯಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಜವರನಾಯಕರು,ಮುಖಂಡರಾದ ಚಿಕ್ಕನಾಯಕರು,ಕರಿಯನಾಯಕರು,ಕೃಷಿ ಇಲಾಖೆಯ ಕಾರ್ತಿಕ್,ಬಸವರಾಜು ಮತ್ತು ಸಿಬ್ಬಂದಿ ಭಾಗವಹಿಸಿದರು.