ತುಂಬಿದ ಕಪಿಲೆ ಜನಜೀವನ ಅಸ್ತವ್ಯಸ್ಥ ಶಾಸಕ ಹರ್ಷವರ್ದನ್ ಮಾತಿಗೂ ಕ್ಯಾರೆ ಎನ್ನದೇ ಸುರಕ್ಷತೆ ಜಾಗೃತಿ ಮೂಡಿಸದ ತಾಲೂಕು ಆಡಳಿತ

ನಂಜನಗೂಡು :11 ಜುಲೈ 2022

ನಂದಿನಿ ಮೈಸೂರು

ಒಂದು ಕಡೆ ಅಯ್ಯೋ ನಮ್ಮ ಮನೆ ಮುಳುಗೋಯ್ತು ಅಂತ ಜನ ಕಣ್ಣೀರು ಹಾಕ್ತೀದ್ರೇ.ಇನ್ನೊಂದು ಕಡೆ ಅಪಾಯದ ಅಂಚಿನಲ್ಲಿ ನಿಂತು ಹರಕೆ ತೀರಿಸಲೂ ನದಿಯಲ್ಲಿ ಸ್ನಾನ ಮಾಡುತ್ತಿರುವ ಭಕ್ತರು,
ನಂಜನಗೂಡಿನ ಶಾಸಕ ಹರ್ಷವರ್ಧನ್ ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆ ಮುನ್ನೆಚ್ಚರಿಕೆಯ ಸಭೆ ನಡೆಸಿದ್ದಾರೂ.
ಗ್ರಾಮಲೆಕ್ಕಾಧಿಕಾರಿ ರೆವೆನ್ಯೂ ಇನ್ಸ್ ಪೆಕ್ಟರ್ ಮತ್ತು ಕಂದಾಯ ಇಲಾಖಾಧಿಕಾರಿಗಳು ಯಾರೂ ಕೂಡ ತಗ್ಗು ಪ್ರದೇಶಕ್ಕೆ ತೆರಳಿ ಸಾರ್ವಜನಿಕರಲ್ಲಿ ಯಾವುದೇ ಜಾಗೃತಿ ಮೂಡಿಸಿಲ್ಲ. ಯಾವುದೇ ಆಶ್ರಯತಾಣಗಳನ್ನು ಕೂಡ ವ್ಯವಸ್ಥೆ ಮಾಡಲು ಮುಂದಾಗಿಲ್ಲ .ಶಾಸಕ ಹರ್ಷವರ್ಧನ್ ಮಾತಿಗೂ ಕ್ಯಾರೆ ಎನ್ನದ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ದ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಜಲಾಶಯಗಳು ಭರ್ತಿಯಾಗಿತ್ತು.
ಕಪಿಲಾ ನದಿಯಲ್ಲಿ ನಲವತ್ತೈದು ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಕಪಿಲಾ ಸೇತುವೆ ಮುಳುಗುವ ಹಂತ ತಲುಪಿದೆ.

ಮೈಸೂರು ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ದೇವರಾಜ ಅರಸು ಸೇತುವೆ ಮುಕ್ಕಾಲು ಭಾಗ ತುಂಬಿ ತುಳುಕುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಪುರಾತನ ಕಾಲದ ದೇವರಾಜ ಅರಸು ಸೇತುವೆ,
ನಂಜುಂಡೇಶ್ವರನ ದೇವಾಲಯದ ಹದಿನಾರುಕಾಲು ಮಂಟಪ,ಕಪಿಲಾ ನದಿ ದಡದ ಸಮೀಪದಲ್ಲಿರುವ ಸ್ನಾನಘಟ್ಟ,ಮುಡಿ ಕಟ್ಟೆ ಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಳುಗಡೆಯಾಗಿದೆ.
ಹಳ್ಳದಕೇರಿ, ಸೇರಿದಂತೆ ಪಟ್ಟಣದ ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ.

ಕಪಿಲಾ ನದಿಯ ನೀರು ಹೆಚ್ಚಳವಾಗುತ್ತಿದ್ದರೂ ಅಲರ್ಟ್ ಆಗದೆ ಮೌನವಹಿಸಿರುವ ತಾಲ್ಲೂಕು ಆಡಳಿತ ನಡೆ ಕಂಡು ಜನರು ಕಂಗಾಲಾಗಿದ್ದಾರೆ.

 

Leave a Reply

Your email address will not be published. Required fields are marked *