ನಂದಿನಿ ಮೈಸೂರು
ಸುತ್ತೂರು ಜಾತ್ರಾ ಮಹೋತ್ಸವ 2023 ಹಿನ್ನೆಲೆ ಇದೇ ಮೊದಲ ಬಾರಿಗೆ ಕಪಿಲ ಆರತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರತಿ ವರ್ಷ ಬರೀ ತೆಪ್ಪೋತ್ಸವ ಕಾರ್ಯಕ್ರಮ ಮಾತ್ರ ನಡೆಯುತ್ತಿತ್ತು ಈ ಬಾರಿ ತೆಪೋತ್ಸವಕ್ಕೆ ಮತ್ತಷ್ಟು ಮೆರಗು ನೀಡಲು ಯುವ ಬ್ರಿಗೇಡ್ ವತಿಯಿಂದ ಕಪಿಲ ಆರತಿ ಕಾರ್ಯಕ್ರಮ ಆಯೋಜನೆಗೊಂಡಿದೆ.
30 ಜನ ಸ್ವಯಂ ಸೇವಕರು ಕಪಿಲ ಆರತಿಗೆ ನದಿಯಲ್ಲಿ ಬ್ಯಾರಲ್ ಬಳಸಿ ವೇದಿಕೆ ನಿರ್ಮಾಣದಲ್ಲಿ ನಿರತರಾಗಿದ್ದಾರೆ.
ಯುವ ಬ್ರಿಗೇಡ್ ಸುನೀಲ್ ಮಾತನಾಡಿ ಜ.22 ರಂದು ಭಾನುವಾರ ಕಪಿಲ ನದಿ ತೀರದ ಶಿವರಾತ್ರೀಶ್ವರ ಶಿವಯೋಗಿಗಳ ಸ್ಥಾನ ಘಟ್ಟದಲ್ಲಿ ಇದೇ ಮೊದಲ ಬಾರಿಗೆ ಕಪಿಲ ಆರತಿಗೆ ಸುತ್ತೂರು ಶ್ರೀಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಬ್ಯಾರಲ್ ಬಳಸಿ ವೇದಿಕೆ ನಿರ್ಮಾಣ ಹಾಗೂ ಕಮಾನು ನಿರ್ಮಾಣ ಮಾಡಲಾಗುತ್ತದೆ.ಪೂಜಾ ಕಾರ್ಯಕ್ರಮ ನಡೆಯಲಿದೆ.ಜೊತೆಗೆ ಯುವ ಬ್ರಿಗೇಡ್ ಜನರಿಗೊಂದು ಮನವಿ ಮಾಡುತ್ತಿದೆ.ಪುರೋಹಿತರು ನಿಮಗೆ ಒಳ್ಳೆಯದಾಗುವುದು ನದಿಗೆ ನೀವು ಬಟ್ಟೆ ಬಿಡಬೇಕು ಅಂತ ಸಲಹೆ ಕೊಡುತ್ತಾರೆ ಅದರಂತೆ ಜನರು ನದಿಗೆ ಬಟ್ಟೆ, ಹೂ,ತ್ಯಾಜ್ಯ ವಸ್ತುಗಳನ್ನ ಬಿಡುತ್ತಾರೆ.ಅದ್ದರಿಂದ ಪಾಪ ಪುಣ್ಯ ಬರುವುದಿಲ್ಲ.ನದಿಯನ್ನ ರಕ್ಷಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತೆಪ್ಪೋತ್ಸವ ಬಾಣಬಿರುಸುಗಳ ಪ್ರದರ್ಶನಕ್ಕೂ ಮುನ್ನ ಈ ಬಾರೀ ಕಪಿಲ ಆರತಿ ಕಣ್ತುಂಬಿಕೊಳ್ಳಬಹುದಾಗಿದೆ.