ಕಾಂಗ್ರೆಸ್ ಪಕ್ಷ ಸೇರಿದ ಜೆಡಿಎಸ್ ಬೆಂಬಲಿಗರಿಗೆ ಪಕ್ಷದ ಬಾವುಟ ನೀಡಿದ ಸಿದ್ದರಾಮಯ್ಯ

ನಂದಿನಿ ಮೈಸೂರು

ಮೈಸೂರಿನಲ್ಲಿ ಇಂದು ಆಯೋಜಿಸಿದ್ದ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಜೆಡಿಎಸ್ ನ ಮಾಜಿ ಶಾಸಕರಾದ ಸುನಿತಾ ವೀರಪ್ಪಗೌಡ, ಜೆಡಿಎಸ್ ನ ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಯರಗನಹಳ್ಳಿ ಮಹದೇವ, ಕೆಂಪನಾಯಕ, ರುಕ್ಮಿಣಿ ಮಹದೇವ, ಚನ್ನವೀರಪ್ಪ ಮತ್ತವರ ಬೆಂಬಲಿಗರನ್ನು ಬರಮಾಡಿಕೊಂಡು, ಶುಭ ಕೋರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ. ತಿಮ್ಮಯ್ಯ, ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *