ನಂದಿನಿ ಮೈಸೂರು
ನಿರಾಶ್ರೀತರ ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಅರ್ಥಪೂರ್ಣವಾಗಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ವಾರ್ಡ್ ನಂ. 24 ದೇವರಾಜ ಮೊಹಲ್ಲಾದಲ್ಲಿರುವ ನ್ಯೂ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ನಿರಾಶ್ರೀತರ ಕೇಂದ್ರದಲ್ಲಿ ಕನ್ನಡ ಕೈರಳಿ ಫೋರಂ ಚಾರಿಟಬಲ್ ಟ್ರಸ್ಟ್ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಗಣ್ಯರು ಹಾಗೂ ನಿರಾಶ್ರೀತರಾದ ಮಣಿ,ವೆಂಕಟೇಶ್ ಒಟ್ಟುಗೂಡಿ ಧ್ವಜಾರೋಹಣ ಮಾಡಿದರು.
ನಿರಾಶ್ರೀತರ ಕೇಂದ್ರದಲ್ಲಿ 47 ಜನ ನಿರಾಶ್ರೀತರು ಆಶ್ರಯ ಪಡೆದಿದ್ದು ಕಾರ್ಯಕ್ರಮ ಹಿನ್ನೆಲೆ ಅವರಿಗೆ ಭೋಜನದ ವ್ಯವಸ್ಥೆ ಮಾಡಿದ್ದರು.ಮುಂದಿನ ದಿನಗಳಲ್ಲಿ ನಿರಾಶ್ರೀತರಿಗೆ ಅವಶ್ಯಕತೆ ಇರುವುದನ್ನ ದೊರಕಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಮನು ಬಿ ಮೆನನ್ , ಉಪಾಧ್ಯಕ್ಷ ಅನಿರುದ್ಧ,ಕಾರ್ಯದರ್ಶಿ ಪಿ.ವಿ ಜಾರ್ಜ್ ,ಖಜಾಂಜಿ ಸಿಜು ಕೃಷ್ಣನ್,ಹರಿದಾಸ್,ವಿಜಯನ್, ರಾಧಾಕೃಷ್ಣನ್, ಜಾರ್ಜ್ ಕುಟ್ಟಿ,ವಿನೋದ್,ನಿರಾಶ್ರೀತ ಕೇಂದ್ರದ ವ್ಯವಸ್ಥಾಪಕರಾದ ರೇತನ್ ಸೇರಿದಂತೆ ಟ್ರಸ್ಟ್ ನ ಸದಸ್ಯರು ಭಾಗಿಯಾಗಿದ್ದರು.