ನಂದಿನಿ ಮೈಸೂರು
ಕನ್ನಡ ಚಿಂತನೆ ನಿತ್ಯ ನಡೆಯಲಿ’ : ಮಹಾಪೌರರಾದ ಶಿವಕುಮಾರ್
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾಕ್ಟರ್ ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕನ್ನಡ ಧ್ವಜವನ್ನು ಆರಿಸುವ ಮೂಲಕ ೬೮ ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಹಾಪೌರರಾದ ಶಿವಕುಮಾರ್
ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬ ಕನ್ನಡಿಗ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
‘ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಮೃದ್ಧವಾಗಿ ಬೆಳೆಯಲು ಸಾಧ್ಯ. ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿದರೆ ಸಾಲದು, ಕನ್ನಡ ಬೆಳವಣಿಗೆಯ ಬಗ್ಗೆ ನಿತ್ಯ ಚಿಂತನೆ ನಡೆಯಬೇಕು’ ಎಂದರು.ನಂತರ ಮಕ್ಕಳಿಗೆ ಸಿಹಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾಕ್ಟರ್ ಎಸ್ ಪಿ ಯೋಗಣ್ಣ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ಶ್ರೀನಾಥ್ ಬಾಬು, ವಾಸುದೇವ್ ಮೂರ್ತಿ, ಜಿ ರಾಘವೇಂದ್ರ, ಕಿಶೋರ್ ಕುಮಾರ್, ಸುಬ್ಬಣ್ಣ, ಹೇಮಂತ್, ಕಿರಣ್, ಶೇಖರ್, ಹರೀಶ್ ನಾಯ್ಡು ಹಾಗೂ ಇನ್ನಿತರರು ಹಾಜರಿದ್ದರು.