ನಂದಿನಿ ಮೈಸೂರು
ಪ್ರಸವ ಪೂರ್ವವಾಗಿ ಜನಿಸಿದ ಮಕ್ಕಳಿಗೆ ತಾಯಿ ಹಾಗೂ ತಂದೆಯೊಡನೆ ದೈಹಿಕ ಬಾಂಧವ್ಯ ಅತ್ಯಗತ್ಯವಾಗಿರುತ್ತದೆ. ಈ ರೀತಿ ಬೆಳೆದ ಮಕ್ಕಳು ಆರೋಗ್ಯಪೂರ್ಣವಾಗಿರುತ್ತವೆ. ಈ ನಿಟ್ಟಿನಲ್ಲಿ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿಶಿಷ್ಟ ವಿಧಾನಗಳನ್ನು ಅನುಸರಿಸುತ್ತಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ನಂದಿತಾ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶಿಷ್ಟ ವಿಧಾನವನ್ನು ಚರ್ಮದಿಂದ ಚರ್ಮದ ಸಂಪರ್ಕ ಉತ್ತೇಜನ ಎಂದೇ ಕರೆದರೂ ಶಿಶುವು ತಾಯಿಯ ಎದೆಯೊಡನೆ ಹೆಚ್ಚು ಸಮಯ ಇರುವಂತೆ ನೋಡಿಕೊಳ್ಳುವುದಾಗಿದೆ. ಈ ರೀತಿ ವಿಧಾನದಲ್ಲಿ ವಿಶಿಷ್ಟ ಬಟ್ಟೆಯ ಪಟ್ಟಿ ಬಳಸಲಾಗುತ್ತದೆ. ಹೀಗಾಗಿ ಶಿಶು ಹಾಗೂ ತಾಯಿ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದು ವಿವರಿಸಿದರು.
ಅಲ್ಲದೆ, ಅಕಾಲಿಕವಾಗಿ ಜನಿಸಿದ ಮಕ್ಕಳಿಗಂತೂ ಈ ವಿಧಾನ ಅತ್ಯುಪಯುಕ್ತವಾದುದಾಗಿದೆ. ಇದರೊಡನೆ ಅಂತಹ ಮಕ್ಕಳಿಗೆ ಸೂಕ್ತ ಆರೈಕೆ ಮಾಡುವಂತೆ ಆಸ್ಪತ್ರೆ ತಿಳಿವಳಿಕೆ ನೀಡುತ್ತದೆ ಎಂದರು.
ಜೀವನಶೈಲಿ ಬದಲಾವಣೆ, ತಾಯಿಯಲ್ಲಿ ಅಧಿಕ ರಕ್ತದೊತ್ತಡದಂತಹ ಸಮಸ್ಯೆ, ಕೃತಕ ಸಂತಾನೋತ್ಪತ್ತಿ ವಿಧಾನಗಳಿಂದಾಗಿ ಅಕಾಲಿಕವಾಗಿ ಶಿಶು ಜನಿಸುವ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿದೆ. ಹೀಗಾಗಿ ಪ್ರತಿ ನವೆಂಬರ್ ೧೭ ರಂದು ಇಂತಹ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ರೀತಿ ಜನಿಸಿದ ಮಕ್ಕಳ ಬಗ್ಗೆ ಸಹಜವಾಗಿಯೇ ಪೋಷಕರಲ್ಲಿ ಆತಂಕ ಇರುತ್ತದೆ. ಆದರೆ ಈ ಬಗ್ಗೆ ಸೂಕ್ತ ತಿಳಿವಳಿಕೆ, ಮಾಹಿತಿ ಪೋಷಕರಿಗೆ ಇರಬೇಕಾದ ಅಗತ್ಯವಿದೆ. ಈ ರೀತಿ ಅರಿವು ಮೂಡಿಸುವ ಕೆಲಸ ಈ ದಿನದಂದು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಡಾ. ಶೇಖರ್ ಸುಬ್ಬಯ್ಯ, ಡಾ. ಶುಭ ಹಾಜರಿದ್ದರು.