ಜುಲೈ 20 ರಂದು ಕಬಿನಿ,ಕೆಆರ್ ಎಸ್ ಜಲಾಶಯಗಳಿಗೆ ಬಾಗಿನ ಅರ್ಪಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು:18 ಜುಲೈ 2022

ನಂದಿನಿ ಮೈಸೂರು

ನಿರಂತರ ಮಳೆಯಿಂದ ರಾಜ್ಯದಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಜುಲೈ 20 ರಂದು ಕಬಿನಿ ಹಾಗೂ ಕೆ ಆರ್ ಎಸ್ ಡ್ಯಾಂಗಳಿಗೆ ಭಾಗಿನ ಅರ್ಪಿಸಲಿದ್ದಾರೆ ಎಂದು ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ಆದೇಶ ಹೊರಡಿಸಲಾಗಿದೆ.

ಜುಲೈ 20 ರಂದು ಬೆಳಗ್ಗೆ ಬೆಂಗಳೂರಿನ ಎಚ್ ಎ .ಎಲ್ ವಿಮಾನ ನಿಲ್ದಾಣದಿಂದ ಹೊರಟು ಮೈಸೂರಿನ ಮಂಡಗಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ತರಳಲಿರುವ ಅವರು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.ನಂತರ ಎಚ್.ಡಿ.ಕೋಟೆ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಹೆಚ್.ಡಿ.ಕೋಟೆಯಿಂದ ವಿಮಾನದ ಮೂಲಕ
ಮಂಡ್ಯ ಜಿಲ್ಲೆ ಕೆ.ಆರ್.ಎಸ್ ಜಲಾಶಯಕ್ಕೆ ಬಾಗಿನ ಅರ್ಷಿಸಲಿದ್ದಾರೆ.ಅಂದಿನ ಕಾರ್ಯಕ್ರಮದಲ್ಲಿ ಸಿ.ಎಂ.ಜೊತೆ ಸಂಸದರು, ಸಚಿವರು, ಶಾಸಕರು,ಸ್ಥಳೀಯ ನಾಯಕರು ಅಧಿಕಾರಿಗಳು ಭಾಗಿಯಾಗಲಿದ್ದಾರೆ.

Leave a Reply

Your email address will not be published. Required fields are marked *