ಜೆಎಸ್ಎಸ್ ಪ್ರೌಢಶಾಲೆ 10th D ಸೆಕ್ಷೆನ್ ನ ಹಳೆಯ ವಿಧ್ಯಾರ್ಥಿಗಳಿಂದ 24 ವರ್ಷಗಳ ಬಳಿಕ‌ ಶಿಕ್ಷಕರಿಗೆ ಗುರುವಂದನೆ

ನಂದಿನಿ ಮೈಸೂರು

*24 ವರ್ಷಗಳ ಬಳಿಕ ಒಟ್ಟಾಗಿ ಸೇರಿ ತಮ್ಮ ಪ್ರೌಢಶಾಲಾ ಗುರುಗಳಿಗೆ ಗುರುವಂದನೆ ಸಲ್ಲಿಸಿದ ಹಳೆಯ ವಿಧ್ಯಾರ್ಥಿಗಳು*

ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ ಗುರುವೇ ಸಾಕ್ಷಾತ್ ಪರಬ್ರಹ್ಮ ಎನ್ನುವಂತೆ ಗುರುಗಳು ದೇವರಿಗೆ ಸಮ ಎಂದು ಮೈಸೂರಿನ ಸಿದ್ದಪ್ಪ ಸ್ಕ್ವೇರ್ ನ ಜೆಎಸ್ಎಸ್ ಪ್ರೌಢಶಾಲೆಯ 10th D ಸೆಕ್ಷೆನ್ ನ ಹಳೆಯ ವಿಧ್ಯಾರ್ಥಿಗಳು 24 ವರ್ಷಗಳ ಬಳಿಕ ತಮ್ಮ‌ನೆಚ್ವಿನ ಗುರುಗಳನ್ನು ನೆನೆದು ಅವರಿಗೆ ಗುರುವಂದನೆ ಸಲ್ಲಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಿಸಿದ್ದಾರೆ

ಹೌದು ಹಳೆಯ ವಿಧ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಬೇಕೆಂದು , ಪರಸ್ಪರ ಭೇಟಿಯಾಗಿ ತಮ್ಮ ನೆಚ್ಚಿನ ಗುರುಗಳಾದ ಎಂ.ಎಸ್ ಬಸವಣ್ಣ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಅವರಿಗೆ ಗುರುವಂದನೆ ಸಲ್ಲಿಸಿ
ಅರ್ಥ ಪೂರ್ಣ ಕ್ಷಣಗಳಿಗೆ ಸಾಕ್ಷಿಯಾದರು

ಗುರುಗಳ ಜೊತೆಯಲ್ಲಿ ಕೆಲಕಾಲ ಮಾತನಾಡುತ್ತ ಹಳೆಯ ದಿನಗಳನ್ನು ಮೆಲುಕು ಹಾಕುವ ಮೂಲಕ ಸುಂದರ ಕ್ಷಣಗಳನ್ನು ನೆನಪು ಮಾಡಿಕೊಂಡರು

ಇದೆ ಸಂಧರ್ಭದಲ್ಲಿ ಸಹಪಾಠಿಗಳಾದ ಮಹದೇವ ಪ್ರಸಾದ್, ಚಂದ್ರಶೇಖರ್ ಮೂರ್ತಿ, ಶ್ರೀಕಂಠ, ಎಂ .ಕುಮಾರ ಸ್ವಾಮಿ, ನಾಗೇಶ್, ಲೋಹಿತ್ , ವೆಂಕಟೇಶ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್, ದೇವರಾಜ್ ಪಾಲ್ಗೊಂಡಿದ್ದರು, ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯ ವಾಗದ ಸ್ನೇಹಿತರು
ಗುರುಗಳಿಗೆ ಕರೆ ಮಾಡಿ ವಂದಿಸಿದರು ..

ಒಟ್ಟಾರೆ ಶಿಕ್ಷಕರ ದಿನಾಚರಣೆ ದಿನವನ್ನು ಬಹಳ ವಿಭಿನ್ನವಾಗಿ ಆಚರಿಸಿದ ಹಳೆಯ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಗಮನಾರ್ಹ

Leave a Reply

Your email address will not be published. Required fields are marked *