ಅರೂರ್ ಜಗದೀಶ್, ನಿರ್ಮಾಪಕ ಸಂಘದವರು 24 ಗಂಟೆ ಒಳಗೆ ಅನಿರುದ್ಧ ರವರನ್ನು ಕ್ಷಮೆಯಾಚಿಸಬೇಕು ಇಲ್ಲವಾದ್ದಲ್ಲಿ ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ ಮಂಜುನಾಥ್

ಮೈಸೂರು:25 ಆಗಸ್ಟ್ 2022

ನಂದಿನಿ ಮೈಸೂರು

ನಟ ಅನಿರುದ್ ರವರನ್ನು ಧಾರವಾಹಿಗಳಲ್ಲಿ ಬ್ಯಾನ್ ಮಾಡಿ ಅವಮಾನ ಮಾಡಿರುವ ಅರೂರ್ ಜಗದೀಶ್ ಹಾಗೂ ನಿರ್ಮಾಪಕ ಸಂಘದವರು 24 ಗಂಟೆ ಒಳಗೆ ಅನಿರುದ್ಧ ರವರನ್ನು ಕ್ಷಮೆಯಾಚಿಸಬೇಕು ಇಲ್ಲವಾದ್ದಲ್ಲಿ ಧಾರವಾಹಿಯ ಚಿತ್ರಿಕರಣ ನಡೆಯುವ ಸ್ಥಳದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸುವುದಾಗಿ
ಕರ್ನಾಟಕ ರಾಜ್ಯ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟ ಎಚ್ಚರಿಕೆ ನೀಡಿದರು

ಮಾಧ್ಯಮಗಳೊಂದಿಗೆ ಒಕ್ಕೂಟದ ಅಧ್ಯಕ್ಷ
ಸಿ.ವಿ.ಮಂಜುನಾಥ್ ಮಾತನಾಡಿ ಇತ್ತೀಚೆಗೆ ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುದ್ಧ ರವರನ್ನು ತೆಗೆದು ಹಾಕಿ ಧಾರಾವಾಹಿ ನಿರ್ಮಾಪಕ ಸಂಘದವರು ಅವರನ್ನು 2 ವರ್ಷಗಳ ಕಾಲ ನಿಷೇಧ ಮಾಡಿರುತ್ತೇವೆ ಎಂದು ಮಾಧ್ಯಮದ ಮೂಲಕ ತಿಳಿಸಿರುತ್ತಾರೆ . ಇದನ್ನು ಕರ್ನಾಟಕ ರಾಜ್ಯ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ತೀವ್ರವಾಗಿ ಖಂಡಿಸುತ್ತದೆ ಮತ್ತು ಅನಿರುದ್ಧ ರವರು ಉತ್ತಮ ನಡತೆಯುಳ್ಳ ವ್ಯಕ್ತಿಯಾಗಿದ್ದು ಮಹಾನ್ ನಾಟರಾದ ಡಾ.ವಿಷ್ಣುವರ್ಧನ್ ರವರ ಅಳಿಯರಾಗಿರುತ್ತಾರೆ ಆದರೆ ಇತ್ತೀಚೆಗೆ ಜೊತೆ – ಜೊತೆಯಲ್ಲಿ ಧಾರವಾಹಿಯ ನಿರ್ಮಾಪಕರು ಆರೂರು ಜಗದೀಶ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಭಾಸ್ಕರ್ ರವರು ಅನಿರುದ್ಧ ರವರ ಬಗ್ಗೆ ಹಗುರವಾಗಿ ಮಾತನಾಡಿ ಅವರನ್ನು 2 ವರ್ಷಗಳ ಕಾಲ ನಿಷೇಧ ಮಾಡಿರುತ್ತಾರೆ. ಡಾ.ವಿಷ್ಣುವರ್ಧನ್ ರವರ ಅಭಿಮಾನಿಗಳು ಜೊತೆ ಜೊತೆಯಲಿ ಧಾರವಾಹಿಯನ್ನು ನಂಬರ್ ಒನ್ ಸ್ಥಾನಕ್ಕೆ ತರಲು ಸಮಸ್ತ ವಿಷ್ಣು ಅಭಿಮಾನಿಗಳು ಸಂಪೂರ್ಣವಾಗಿ ನೋಡಿರುತ್ತಾರೆ . ವಿಷ್ಣುವರ್ಧನ್‌ರವರ ಅಳಿಯ ಎನ್ನುವ ಕಾರಣಕ್ಕೆ , ಆದರೆ ಕಾಲವಿದರಿಗೆ ಅಗೌರವ ನೀಡಿ ಇಲ್ಲಸಲ್ಲದ ಆರೋಪ
ಮಾಡಿರುತ್ತಾರೆ . ಚಿತ್ರಕರಣದ ಸಮಯದಲ್ಲಿ ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸಲು , ಮೇಕಪ್ ಮಾಡಿಕೊಳ್ಳಲು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಡಿ ಎಂದು ನಿರ್ಮಾಪಕರಿಗೆ ಅನಿರುದ್ಧ ರವರು ಒತ್ತಾಯಿಸಿರುತ್ತಾರೆ ಹಾಗೂ ಮಾತಿನಂತೆ ವೇತನ ಕೇಳಿರುತ್ತಾರೆ ಸರಿಯಾದ ರೀತಿ ಮಾತಿನ ಪ್ರಕಾರ ವೇತನ ಕೊಡದೇ ಹಾಗೂ ಶೌಚಾಲಯ ಇತರೆ ವ್ಯವಸ್ಥೆಯನ್ನು ಮಾಡದೇ ಅಗೌರವವಾಗಿ ನಡೆದುಕೊಂಡು ಇಲ್ಲಸಲ್ಲದ ಆರೋಪ ಮಾಡಿರುತ್ತಾರೆ . ಬ್ಯಾನ್ ( ನಿಷೇಧ ) ಮಾಡಿರುವುದರ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ಅಭಿಮಾನಿಗಳು ಎಚ್ಚರಿಸುತ್ತೇವೆ ಎಂದರು.

ಅಶೋಕ್ ಮತ್ತು ಜಯಕುಮಾರ್ ಜೊತೆಗಿದ್ದರು.

Leave a Reply

Your email address will not be published. Required fields are marked *