ನಂದಿನಿ ಮೈಸೂರು
*ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮೈಸೂರು ಕೇಂದ್ರ ಕಾರಾಗೃಹ ಭೇಟಿ.*
*ಸಜಾ ಬಂಧುಗಳಿಂದ ಮನವಿ ಸ್ವೀಕಾರ.*
ಮೈಸೂರು ಜಿಲ್ಲಾ ಪ್ರವಾಸ ದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು, ಮೈಸೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.
ಭೇಟಿ ಸಮಯದಲ್ಲಿ, ಕಾರಾಗೃಹದ ಸಿಬ್ಬಂದಿಗಳೇ ನಿರ್ವಹಿಸುವ, ಕಾರಾಗೃಹದ ಎಫ್ ಎಂ ಬಾನುಲಿ ಕೇಂದ್ರವನ್ನು ವೀಕ್ಷಿಸಿದರು. ಹಾಗೂ ಬಾನುಲಿ ಪ್ರಸಾರ ಕೇಂದ್ರದ ಮೂಲಕ, ಕಾರಾಗೃಹ ವಾ ಉದ್ದೇಶಿಸಿ ಮಾತನಾಡಿದರು.
ಸರಕಾರದಿಂದ ಬಂಧಿ ಕೈದಿಗಳ ಪುನರ್ವಸತಿ, ಹೆಚ್ಚಿಸಿರುವ ಕೂಲಿ ದರ, ಹಾಗೂ ಕಾರಾಗೃಹ ಅಭಿವೃದ್ದಿ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಬಗ್ಗೆ, ಬಂಧಿಗಳ ಗಮನ ಸೆಳೆದರು.
ಕಾರಾಗೃಹ ವನ್ನು ಸುಧಾರಣೆಯ ಹಾಗೂ ಮನ ಪರಿವರ್ತನೆಯ ತಾಣ ವೆಂದು, ಸ್ವೀಕರಿಸಿ, ಹಾಗೂ ಇಲ್ಲಿನ ಹೊರತಾಗಿಯೂ ಬದುಕು ಇದೆ ಎಂಬ ವಾಸ್ತವವನ್ನು ಅರಿತು ಕೊಳ್ಳಿ ಎಂದು, ಹೇಳಿದ ಸಚಿವರು, ಎಲ್ಲರಿಗೂ ಶುಭ ಹಾರೈಸಿದರು.
ಕಾರಾಗೃಹ ದಲ್ಲಿರುವ, ಕೈ ಮಗ್ಗ ಘಟಕ, ಕೌಶಲ್ಯ ಅಭಿವೃದ್ದಿ ಕೇಂದ್ರ, ಹೊಲಿಗೆ ತರಭೇತಿ ಘಟಕಕ್ಕೂ ಭೇಟಿ ನೀಡಿದ ಸಚಿವರು, ಸಜಾ ಬಂಧಿ ಕೈದಿಗಳ ಜತೆ, ಸಂಭಾಷಿಸಿದರು.
ಕಾರಾಗೃಹದ ಒಳಗಿರುವ, ಕೈದಿಗಳ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ ಸಚಿವರನ್ನು, ಕೈದಿಗಳು, ಸುಶ್ರಾವ್ಯ ವಾಗಿ ಹಾಡುವುದರ ಮೂಲಕ ಬರ ಮಾಡಿಕೊಂಡರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವಿದ್ಯಾನಿಲಯದ, ಕೇಂದ್ರ ಕಾರಾಗೃಹದ ಘಟಕವನ್ನು ವೀಕ್ಷಿಸಿದರು.
ಸಜಾ ಬಂಧಿ ಕೈದಿಗಳಿಂದ ಸಚಿವರು ಮನವಿ ಸ್ವೀಕರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಮಹಿಳಾ ಸಜಾಬಂಧಿ ಗಳನ್ನು ಸಹ ಸಚಿವರು ಭೇಟಿ ನೀಡಿ, ಅವರ ಅಹವಾಲುಗಳನ್ನು ಸ್ವೀಕರಿಸಿದರು.
ಕಾರಾಗೃಹದ ಅಡುಗೆ ವಿಭಾಗಕ್ಕೆ ಭೇಟಿ ನೀಡಿದ ಸಚಿವರು, ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು, ಸೂಚಿಸಿದರು.
ನಂತರ ಜೈಲು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಜೈಲಿನ ಒಳಗಡೆ, ಮಾದಕ ವಸ್ತುಗಳು, ಮೊಬೈಲ್ ಫೋನ್ ಬಳಕೆ ವಿರುದ್ಧ ತೀವ್ರ ನಿಗಾ ವಹಿಸಬೇಕು ಎಂದು, ನಿರ್ದೇಶನ ನೀಡಿದರು.
ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಶ್ರೀಮತಿ ಕೆ ಸಿ ದಿವ್ಯಶ್ರೀ ಸೇರಿದಂತೆ, ಹಿರಿಯ ಅಧಿಕಾರಿಗಳೂ ಉಪಸ್ಥಿತರದ್ದರು.