ನ್ಯಾಯಾಧೀಶ ‌ಮಲ್ಲಿಕಾರ್ಜುನ ಗೌಡ ನಡೆ ಖಂಡಿಸಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಮೈಸೂರು:29 ಜನವರಿ 2022

ನಂದಿನಿ ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸುವಂತೆ ಹೇಳಿಕೆ ನೀಡಿದ್ದ ನ್ಯಾಯಾಧೀಶ ‌ಮಲ್ಲಿಕಾರ್ಜುನ ಗೌಡ ವಿರುದ್ಧಅಶೋಕಪುರಂನ ಚಿಕ್ಕರಡ್ಡಿ ಯುವಕರ ಸಂಘ ದ ವತಿಯಿಂದ ಸಿಲ್ಕ್ ಫ್ಯಾಕ್ಟರಿ ವೃತ್ತದಲ್ಲಿ ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಿ ಎಂದು ಆಗ್ರಹಿಸಿ ರಸ್ತೆ ತಡೆದು ಮಾನವ ಸರಪಳಿ ಮಾಡಿ ನ್ಯಾಯಾಧೀಶ ‌ಮಲ್ಲಿಕಾರ್ಜುನ ಗೌಡ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ನಂತರ ಮಾತನಾಡಿದ ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವಂತೆ, ಇಡದಂತೆ ಪಟ್ಟು ಹಿಡಿದ ಜಿಲ್ಲಾ ನ್ಯಾಯಾಧೀಶ ‌ಮಲ್ಲಿಕಾರ್ಜುನ ಗೌಡ ಅವರ ನಡೆ‌‌ ಖಂಡನೀಯ. ನ್ಯಾಯಾಧೀಶ ಹುದ್ದೆಯಿಂದ ಕೂಡಲೇ ಅವರನ್ನು ವಜಾಗೊಳಿಸಬೇಕು’
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದಾಗ್ಯೂ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳದ ಕೊಳಕು ಮನಸ್ಸುಗಳು ಸಮಾಜದಲ್ಲಿ ಇನ್ನೂ ಜೀವಂತ ಇವೆ ಎಂಬುದಕ್ಕೆ ಬುಧವಾರ ರಾಯಚೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ’ ಎಂದು ಕಿಡಿಕಾರಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ‌ಸಿಕ್ಕು 75 ವರ್ಷಗಳಾಗಿವೆ. ಗಣರಾಜ್ಯೋತ್ಸವವಾಗಿ 73 ವರ್ಷಗಳು ಗತಿಸಿದ್ದರೂ, ದೇಶದಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಜಾತಿ,‌ ಧರ್ಮ ಮೀರಿ ದೇಶಕ್ಕೆ ಅಪಾರ‌ ಕೊಡುಗೆ‌ ನೀಡಿದ ಮಹಾನ್ ಚೇತನವನ್ನು ನಾಗರಿಕ ಸಮಾಜದಲ್ಲಿ ಇನ್ನೂವರೆಗೂ ಅಸ್ಪೃಶ್ಯತಾ ಭಾವದಿಂದಲೇ ಕಾಣುತ್ತಿರುವುದು ನೋವಿನ ಸಂಗತಿ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ದೇಶದ ಎಲ್ಲ ವರ್ಗದ ಜನರು‌ ಸ್ವಾಭಿಮಾನ, ಸಮಾನತೆಯಿಂದ ಬದುಕಲೆಂಬ ಕಾರಣಕ್ಕೆ ಸಂವಿಧಾನ ರಚನೆಗೆ ಅಂಬೇಡ್ಕರ್ ತಮ್ಮ ಜೀವವನ್ನೇ ಸವೆಸಿದ್ದಾರೆ. ತಳ‌ ಸಮುದಾಯದ‌ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ದುರಂತವೆಂದರೆ, ಅಂಬೇಡ್ಕರ್ ರಚಿಸಿದ ಸಂವಿಧಾನ‌ವನ್ನೇ ಓದಿಕೊಂಡು ನ್ಯಾಯಾಧೀಶ ಹುದ್ದೆಯಲ್ಲಿರುವ ಮಲ್ಲಿಕಾರ್ಜುನಗೌಡ ತಮ್ಮ ವೃತ್ತಿ ಗೌರವಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಅವರು ಆ ಪೀಠದಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ’ ಎಂದು ತಿಳಿಸಿದ್ದಾರೆ.

ವಕೀಲರಾದ ಪರಂಜ್ಯೋತಿ ಪ್ರತಾಪ್ , ಜವರಯ್ಯ, ಆದರ್ಶ ,ಬೀಮ್ ಪ್ರಸಾದ್, ಶ್ರೀನಿವಾಸ್ ,ಸಂದೀಪ್, ಅರ್ಜುನ್ .ಎನ್, ಬಿ ನರೇಂದ್ರ, ಸತ್ಯರಾಜ್, ಮಂಚಿ ಮೋಹನ್, ಯೋಗ, ಕಾಂಗ್ರೆಸ್ ಯುವ ಮುಖಂಡರಾದ ಮದನ್, ಕೆ ಆರ್ ಕ್ಷೇತ್ರದ ಬಿಜೆಪಿ ಮುಖಂಡ ಪುನೀತ್ , ಕೆ ಆರ್ ಬ್ಯಾಂಕಿನ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ ,ಹಾಗೂ ಚಿಕ್ಕಗರಡಿ ಯುವಕರ ಸಂಘ ಅಶೋಕಪುರಂ ಜನತೆ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *