ನಂದಿನಿ ಮೈಸೂರು
ಇಂಡಿಯನ್ ಲೈಫ್‌ಸ್ಟೈಲ್ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ಹೋಟೆಲ್ ರಿಯೋ ಮೆರಿಡಿಯನ್‌ನಲ್ಲಿ ಇಂದು ಮತ್ತೆ ನಾಳೆ ನಡೆಯಲಿರುವ ಮೇಳಕ್ಕೆ ನಟಿ ಯಶಸ್ವಿನಿ ರವೀಂದ್ರ ರವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಮೈಸೂರಿನ ಜನರಿಗೆ ಒಂದೇ ಸೂರಿನಡಿ ಇಂಡಿಯನ್ ಲೈಫ್‌ಸ್ಟೈಲ್ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ. ಮೇಳದಲ್ಲಿ ದೇಶದ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದೆ.
ಈಗಿನ ಜೀವನಶೈಲಿ ಮತ್ತು ಫ್ಯಾಶನ್‌ಗೆ ಪೂರಕವಾಗಿ ಹೊಸತನದ ವಿನ್ಯಾಸದ ಅತ್ಯದ್ಭುತವಾದ ವಂಡರ್ ಡೈಮಂಡ್ಸ್, ಕೋಕೋ ಲಕ್ಷುರಿ ಇಂಟರ್‌ನ್ಯಾಶನಲ್, ಸಿಕ್ಸ್ ಯಾರ್ಡ್ ಸಿಲ್ಕ್ ಸ ಫ್ಯಾಷನ್ಸ್ ರಾಹುಲ್ಸ್ ದಯಾಲ್ ಸಾಂಪ್ರದಾಯಿಕ ಸಿಲ್ಕ್ ಬೇಗ್ಲಂ ಚಿಂಕಾರಿ, ನವಜಿ ಎಂಟರ್‌ಪೈಸೆಸ್, ಮಹಿ ಕಲೆಕ್ಷನ್ಸ್, ಹೋಂ ಕಂಫರ್ಟ್ಸ್, ಆದಾ ಕಲೆಕ್ಷನ್ ವಿವಿಧ ವಿಶೇಷ ಸಂಗ್ರಹದ ಲೋಕವೇ ಇದೆ.
ವಜ್ರಾಭರಣಗಳು, ಬೆಳ್ಳಿ ಆಭರಣಗಳು, ಕಾಂಚೀವರಂ ಸೀರೆಗಳು, ಹೊಸ ವಿನ್ಯಾಸದ ರೇಷ್ಮೆ ಸೀರೆಗಳು, ವಧು-ವರನಿಗೆ ಅಗತ್ಯವಿರುವ ವಿವಾಹ ವಸ್ತ್ರಗಳು, ಕುರ್ತಾಗಳು, ಟಾಪ್ಸ್, ಫ್ಯಾಷನ್ ಜ್ಯೂಯಲರಿ, ಹ್ಯಾಂಡ್‌ಕ್ರಾಫ್ಟ್ ಜ್ಯೂಯಲರಿ, ವಿವಿಧ ಮಾದರಿಯ ಜವಳಿ ಉತ್ಪನ್ನಗಳು,
ಪ್ರತಿಯೊಂದು ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ.
ಬೆಳಗ್ಗೆ 10.30 ರಿಂದ ರಾತ್ರಿ 8.30ರ ವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಕಾಶ ಇದೆ.