ಮೈಸೂರು:25 ಮೇ 2022
ನಂದಿನಿ ಮೈಸೂರು
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ
ಸ್ವತಂತ್ರ ಅಭ್ಯರ್ಥಿಯಾಗಿರುವ ಎನ್.ಎಸ್.ವಿನಯ್ ರವರು ಇಂದು ನಾಮಪತ್ರ ಸಲ್ಲಿಸಿದರು.
ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ತಮ್ಮ ದಾಖಲಾತಿ ಜೊತೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಅವರು ಜೂನ್ 13 ರಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು ಇಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈಗಾಗಲೇ 1 ವರೆ ವರ್ಷಗಳಿಂದ 4 ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಸುಮಾರು 48 ಸಾವಿರಕ್ಕೂ ಹೆಚ್ಚು ಪದವೀಧರರ ನೋಂದಣೆ ಮಾಡಿಸಿದ್ದೇನೆ.ಪ್ರತಿಯೊಬ್ಬ ಪದವೀಧರನ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.ನಾಳೆ ನಾಳಿದ್ದು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರೀತಿ ಬಿಡುಗಡೆ ಮಾಡುತ್ತೇನೆ.
ಅಧಿಕಾರಕ್ಕೆ ಬಂದರೇ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡುತ್ತೇನೆ ಎಂದರು.